ಕರಾವಳಿ

ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ‌‌ ಸಮಾರೋಪ‌ ಕಾರ್ಯಕ್ರಮ | ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಸಂಸದ ಚೌಟ

Pinterest LinkedIn Tumblr

ಮಂಗಳೂರು: ದೇವಾಡಿಗ ಸಮಾಜದ 100ನೇ ವರ್ಷದ ಕಾರ್ಯಕ್ರಮ ನಿಜಕ್ಕೂ ಅದ್ದೂರಿಯಾಗಿ ಅರ್ಥಪೂರ್ಣವಾಗಿ ನಡೆದಿದೆ. ಸಣ್ಣ ಸಮುದಾಯವೊಂದು ಸಂಘಟನೆಯನ್ನು 100 ವರ್ಷ ಬೆಳೆಸುವುದು ದೊಡ್ಡ ಸಂಗತಿ. ಪೀಳಿಗೆಯಿಂದ ಪೀಳಿಗೆಗೆ ಸಮಾಜವನ್ನು‌ ಮುಖ್ಯವಾಹಿನಿಗೆ ತರಲು ವಿಶ್ವಾಸಯುತ ಕೆಲಸವಾಗುತ್ತಿದೆ ಎಂಬುದಕ್ಕೆ ಇದು ಸಾಕ್ಷಿದಾಯಕವಾಗಿದೆ. ದೇವಾಡಿಗ ಸಮಾಜ ಇಂದು ಬೆಳೆಯುತ್ತಿರುವುದು ಸಂತಸದ ವಿಚಾರ. ಸಣ್ಣ ಸಮುದಾಯ ಧೈರ್ಯವಾಗಿ ಮುಂದೆ ಬರುತ್ತಿರುವುದು ತಮ್ಮಲ್ಲಿರುವ ಪ್ರತಿಭೆಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಶ್ಲಾಘನೀಯ ಎಂದು ದಕ್ಷಿಣಕನ್ನಡ ಲೋಕಸಭಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ಮಂಗಳೂರಿನ ಟಿ.ಎಂ.ಎ. ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಸೆ.20 ರವಿವಾರ ನಡೆದ ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ‌ ಸಮಾರಂಭದ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದ.ಕ ಜಿಲ್ಲೆ ಒಂದು ಅಪರೂಪದ ಜಿಲ್ಲೆ. ಇಲ್ಲಿ ಹಿಂದೂ ಸಮಾಜ ಆದರ್ಶಪ್ರಾಯವಾಗಿ ಬದುಕುತ್ತಿದ್ದು ನಮ್ಮ‌ ನಡುವೆ ಗೊಂದಲ ಏರ್ಪಡಿಸುವುದಕ್ಕೆ ಜಿಲ್ಲೆಯವರು ಮಣೆ ಹಾಕಬಾರದು. ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ನೂರು ವರ್ಷದ ಪ್ರಯಾಣದ ಈ ಹೊತ್ತಿನಲ್ಲಿ ಇಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿ, ಶೈಕ್ಷಣಿಕ ಪ್ರೋತ್ಸಾಹದಂತಹ ಕಾರ್ಯಗಳು ನಿರಂತರವಾಗಿ ನಡೆಯಲಿ.‌ ವಿಷನ್ ಮಂಗಳ ಯಶಸ್ವಿಯಾಗಲಿ ಎಂದು ಹಾರೈಸಿದರು.

ಶತಮಾನೋತ್ಸವ ಆಚರಣೆ ಸಮಿತಿ ಗೌರವಾಧ್ಯಕ್ಷರು, ದುಬೈ ಉದ್ಯಮಿ ಹರೀಶ್ ಶೇರಿಗಾ‌ರ್ ಮಾತನಾಡಿ, ನೂರನೇ ವರ್ಷದ ಹೊಸ್ತಿನಲ್ಲಿ ಶೈಕ್ಷಣಿಕ, ಸಾಮಾಜಿಕವಾಗಿ ಬೆಳೆಯಲು ವಿಷನ್ ಮಂಗಳಾ ಎಂಬ ಮಹತ್ವಾಕಾಂಕ್ಷಿ ಯೋಜನೆ ಹಮ್ಮಿಕೊಳ್ಳಲಾಗಿದೆ. ದೇವಾಡಿಗ ಎಜ್ಯುಕೇಶನ್ ಟ್ರಸ್ಟ್ ನೋಂದಣಿಯಾಗಿದೆ. ದುಬೈ, ಭಾರತ ಹಾಗೂ‌ ಪ್ರಪಂಚದಡದ್ಯಂತ ದಾನಿಗಳನ್ನು ಸಂಪರ್ಕಿಸಿದ್ದು ಯೋಜನೆ ಸಫಲವಾಗುವ ಮೂಲಕ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಶತಮಾನೋತ್ಸವ ಸಂಭ್ರಮ ಎಲ್ಲರ‌ ಮನದಲ್ಲಿ ಶಾಶ್ವತವಾಗಿ ಉಳಿಯಲಿ ಎಂದು ಹಾರೈಸಿದರು.

ಶಾಸಕ ವೇದವ್ಯಾಸ ಕಾಮತ್‌ ಆಗಮಿಸಿ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಧರ್ಮಪಾಲ‌ ಯು.ದೇವಾಡಿಗ, ಕೆ.ಜೆ‌. ದೇವಾಡಿಗ, ದೇವರಾಜ ದೇವಾಡಿಗ ಕೆ., ಹರೀಶ್ ಶೇರಿಗಾರ್ ಮೊದಲಾದವರನ್ನು ಸನ್ಮಾನಿಸಲಾಯಿತು.

ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಕರುಣಾಕರ ಎಂ.ಹೆಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿಷನ್ ಮಂಗಳ ಯೋಜನೆಯ ಗೌರವಾಧ್ಯಕ್ಷ ಡಾ.ದೇವರಾಜ್ ಕೆ., ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.), ಮಂಗಳೂರು ಅಧ್ಯಕ್ಷ ಅಶೋಕ್‌ ಮೊಯ್ಲಿ, ಯೆನೆಪೋಯ ಗೌರವ ಕುಲಾಧಿಪತಿ ಡಾ.ಯೆನೆಪೋಯ ಅಬ್ದುಲ್ಲಾ ಕುಂಞ, ಶ್ರೀನಿವಾಸ್‌ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಎ. ಶ್ರೀನಿವಾಸ್‌ ರಾವ್, ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ ಆಡಳಿತ ನಿರ್ದೇಶಕ ಡಾ.ಸಿ.ಪಿ. ಹಬೀಬ್ ರಹ್ಮಾನ್, ಬ್ಲೂ ರಾಯಲ್ ಗ್ರೂಪ್ ದುಬೈ ವ್ಯವಸ್ಥಾಪಕ ನಿರ್ದೇಶಕ ರೊನಾಲ್ಡ್ ಮಾರ್ಟಿಸ್, ಬಲ್ಲಾಳ್‌ಬಾಗ್ ಫುಡ್‌ಲ್ಯಾಂಡ್ ಹೋಟೆಲ್ ಮಾಲೀಕ ಗಣೇಶ್‌ ಶೆಟ್ಟಿ, ಉದ್ಯಮಿ ಜಗನ್ನಾಥ್ ಶೇರಿಗಾ‌ರ್, ಸಕಲೇಶಪುರ ಬಂಟ್ ಸಂಘದ ಅಧ್ಯಕ್ಷ ಸಂಜೀತ್ ಶೆಟ್ಟಿ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ (ರಿ.), ಮಂಗಳೂರು ಇಲ್ಲಿನ ಪ್ರಧಾನ‌ ಕಾರ್ಯದರ್ಶಿ ವೀಣಾ ಗಣೇಶ್, ಕೋಶಾಧಿಕಾರಿ ಗೀತಾ ಕಲ್ಯಾಣಪುರ್, ಶತಮಾನೋತ್ಸವ ಸ್ಮರಣ ಸಂಚಿಕೆಯ ಸಂಪಾದಕ ತಿಲಕರಾಜ್‌ ಎ. ಮೊದಲಾದವರಿದ್ದರು.

ರೋಹಿತಾಕ್ಷ ಮರೋಳಿ ಸ್ವಾಗತಿಸಿದರು.

(ವರದಿ- ಯೋಗೀಶ್ ಕುಂಭಾಸಿ)

 

Comments are closed.