ರಾಷ್ಟ್ರೀಯ

ದೇಶದಲ್ಲಿ ಒಂದೇ ದಿನ 13,586 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ; ಸೋಂಕಿತರ ಸಂಖ್ಯೆ 3,80,532ಕ್ಕೆ ಏರಿಕೆ

Pinterest LinkedIn Tumblr

ನವದೆಹಲಿ: ಕೊರೋನಾ ವೈರಸ್ ಅಟ್ಟಹಾಸ ದೇಶದಲ್ಲಿ ಮುಂದುವರೆದಿದ್ದು, ಒಂದೇ ದಿನ 13,586 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,80,532ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ 336 ಮಂದಿಯನ್ನು ಮಹಾಮಾರಿ ವೈರಸ್ ಬಲಿಪಡೆದುಕೊಂಡಿದ್ದು, ಈ ಮೂಲಕ ಸಾವಿನ ಸಂಖ್ಯೆ 12,573ಕ್ಕೆ ತಲುಪಿದೆ.

ಇನ್ನು 3,80,532 ಮಂದಿ ಸೋಂಕಿತರ ಪೈಕಿ 2,04,711 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ ದೇಶದಲ್ಲಿ 1,63,248 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

ಮಹಾರಾಷ್ಟ್ರ, ತಮಿಳುನಾಡು, ಗುಜರಾತ್ ಹಾಗೂ ಉತ್ತರಪ್ರದೇಶಗಳು ಅತೀ ಹೆಚ್ಚು ಕೊರೋನಾಪೀಡಿತ ರಾಜ್ಯಗಳಾಗಿ ಮುಂದುವರಿದಿವೆ. ಸಮಾಧಾನದ ಸಂಗತಿಯೆಂದರೆ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣ ಶೇ.53ಕ್ಕೆ ಏರಿಕೆಯಾಗಿದೆ.

Comments are closed.