ರಾಷ್ಟ್ರೀಯ

ಸಾಲ ಮುಕ್ತವಾದ ಅಂಬಾನಿಯ ರಿಲಯನ್ಸ್ ಕಂಪನಿ !

Pinterest LinkedIn Tumblr

ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರಿಂದ 1.69 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದ್ದರಿಂದ ಮತ್ತು ಹಕ್ಕುಸ್ವಾಮ್ಯಗಳನ್ನು ಎರಡು ತಿಂಗಳಲ್ಲಿ ಬಗೆಹರಿಸಿಕೊಂಡ ನಂತರ ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಸಾಲಮುಕ್ತವಾಗಿದೆ ಎಂದು ಉದ್ಯಮಿ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ನವದೆಹಲಿ: ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರಿಂದ 1.69 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದ್ದರಿಂದ ಮತ್ತು ಹಕ್ಕುಸ್ವಾಮ್ಯಗಳನ್ನು ಎರಡು ತಿಂಗಳಲ್ಲಿ ಬಗೆಹರಿಸಿಕೊಂಡ ನಂತರ ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಸಾಲಮುಕ್ತವಾಗಿದೆ ಎಂದು ಉದ್ಯಮಿ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ಎರಡು ತಿಂಗಳಲ್ಲಿ ತನ್ನ ಡಿಜಿಟಲ್ ತಂತ್ರಜ್ಞಾನವಾದ ಜಿಯೊ ಪ್ಲಾಟ್ ಫಾರ್ಮ್ಸ್ ಲಿಮಿಟೆಡ್ ನ ಕಾಲು ಭಾಗ ಷೇರನ್ನು ಜಾಗತಿಕ ಮಟ್ಟದ ತಂತ್ರಜ್ಞಾನ ಹೂಡಿಕೆ ಸಂಸ್ಥೆಗಳಿಗೆ ಮಾರಾಟ ಮಾಡಿ 1.15 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ಅಲ್ಲದೆ ಹಕ್ಕುಸ್ವಾಮ್ಯ ವಿಷಯಗಳಲ್ಲಿ ಕಳೆದ 58 ದಿನಗಳಲ್ಲಿ 53 ಸಾವಿರದ 124.20 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು.

ಕಳೆದ ವರ್ಷ ಇಂಧನ ಚಿಲ್ಲರೆ ವ್ಯಾಪಾರದ ಶೇಕಡಾ 49 ಭಾಗವನ್ನು ಇಂಗ್ಲೆಂಡಿನ ಬಿಪಿ ಪಿಎಲ್ ಸಿಗೆ 7 ಸಾವಿರ ಕೋಟಿ ರೂಪಾಯಿಗೆ ಮಾರಾಟ ಮಾಡಿ ಎಲ್ಲಾ ಒಟ್ಟಾರೆ ಸೇರಿ 1.75 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ರಿಲಯನ್ಸ್ ಮಾರ್ಚ್ 31ರ ಹೊತ್ತಿಗೆ 1 ಲಕ್ಷದ 61 ಸಾವಿರದ 035 ಕೋಟಿ ರೂಪಾಯಿ ನಿವ್ವಳ ಸಾಲ ಹೊಂದಿತ್ತು.

ಇದೀಗ ಷೇರುಗಳ ಮಾರಾಟ ಮತ್ತು ಹೂಡಿಕೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಇಂದು ಸಂಪೂರ್ಣ ಸಾಲಮುಕ್ತವಾಗಿದೆ ಎಂದು ತಿಳಿಸಿದರು.

ನಾನು ನನ್ನ ಕಂಪೆನಿಯ ಷೇರುದಾರರಿಗೆ ನೀಡಿದ್ದ ಭರವಸೆಯಂತೆ ಮುಂದಿನ ವರ್ಷ ಮಾರ್ಚ್ 31, 2021ರ ಮೊದಲೇ ರಿಲಯನ್ಸ್ ಕಂಪೆನಿಯನ್ನು ಸಾಲಮುಕ್ತಗೊಳಿಸಿದ್ದೇನೆ ಎಂದು ಖುಷಿಯಿಂದ ಮುಕೇಶ್ ಅಂಬಾನಿ ಹೇಳಿಕೊಂಡಿದ್ದಾರೆ.

ಕಳೆದ ಏಪ್ರಿಲ್ ತಿಂಗಳಿನಿಂದ ರಿಲಯನ್ಸ್ ನ ಜಿಯೊ ಪ್ರಾಟ್ ಫಾರ್ಮ್ ನಡಿ ಫೇಸ್ ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಡಾಲಾ, ಅಡಿಯಾ, ಟಿಪಿಜಿ, ಎಲ್ ಕ್ಯಾಟ್ಟರ್ಟೊನ್ ಮತ್ತು ಪಿಐಎಫ್ ಸೇರಿ 95 ಕೋಟಿ ರೂಪಾಯಿ ಹೂಡಿಕೆ ಮಾಡಿವೆ.

Comments are closed.