ರಾಷ್ಟ್ರೀಯ

ಭಾರತೀಯ ಸೇನೆಯ ಮುಖ್ಯಸ್ಥರಾಗಿ ಲೆ.ಜನರಲ್ ಮನೋಜ್ ಮುಕುಂದ್ ನಾರವಾನೆ ನೇಮಿಸಲು ಕೇಂದ್ರ ನಿರ್ಧಾರ

Pinterest LinkedIn Tumblr

ನವದೆಹಲಿ:ಭಾರತೀಯ ಸೇನೆಯ ಮುಖ್ಯಸ್ಥರಾಗಿ ಲೆ.ಜನರಲ್ ಮನೋಜ್ ಮುಕುಂದ್ ನಾರವಾನೆ ಅವರನ್ನು ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಲೆ.ಜ,ನಾರವಾನೆ ಸದ್ಯ ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದೇ ತಿಂಗಳ 31ರಂದು ಜನರಲ್ ಬಿಪಿನ್ ರಾವತ್ ಅವರು ಸೇವೆಯಿಂದ ನಿರ್ಗಮಿಸುವುದರಿಂದ ಲೆ.ಜ.ನಾರವಾನೆ ಭಾರತೀಯ ಸೇನೆಯ 28ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸೇವಾ ಹಿರಿತನದ ಆಧಾರದ ಮೇಲೆ ಲೆ.ಜ.ನಾರವಾನೆ ಅವರನ್ನು ಸೇನಾ ಮುಖ್ಯಸ್ಥರಾಗಿ ನೇಮಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇವರು ಕಳೆದ ಸೆಪ್ಟೆಂಬರ್ 1ರಂದು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿದ್ದರು. ಇದಕ್ಕೂ ಮುನ್ನ ಭಾರತೀಯ ಸೇನೆಯ ಪೂರ್ವ ಕಮಾಂಡ್ ಮುಖ್ಯಸ್ಥರಾಗಿದ್ದರು.

ರಾಷ್ಟ್ರೀಯ ರಕ್ಷಣಾ ಶೈಕ್ಷಣಿಕ ಸಂಸ್ಥೆ ಮತ್ತು ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ಲೆ,ನಾರವಾನೆ ವಿದ್ಯಾರ್ಥಿಯಾಗಿದ್ದರು. 1980ರ ಜೂನ್ ನಲ್ಲಿ ಸಿಖ್ ಲೈಟ್ ಇನ್ಫಾಂಟ್ರಿ ರೆಜಿಮೆಂಟ್ 7ನೇ ಬೆಟಾಲಿಯನ್ ಮೂಲಕ ಭಾರತೀಯ ಸೇನೆಗೆ ಸೇರ್ಪಡೆಯಾದರು.

Comments are closed.