ಕರ್ನಾಟಕ

ಮತ್ತೆ ಏರಿಕೆ ಕಂಡ ಈರುಳ್ಳಿ ದರ ! ಕೆಜಿಗೆ ಎಷ್ಟು ಗೊತ್ತೇ…?

Pinterest LinkedIn Tumblr

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ಧಾರಣೆ ಮತ್ತೊಮ್ಮೆ ಏಕಾಏಕಿ ಏರಿಕೆಯಾಗಿದೆ.

ಕಳೆದ ವಾರ ಕೆ.ಜಿ.ಗೆ 90 ರಿಂದ 100 ರೂ. ಇದ್ದ ಉತ್ತಮ ಗುಣಮಟ್ಟದ ಈರುಳ್ಳಿ ಈಗ 120 ರಿಂದ 130 ರೂ.ವರೆಗೆ ಮಾರಾಟವಾಗುತ್ತಿದೆ.

ಯಶವಂತಪುರ ಮಾರುಕಟ್ಟೆ ಹೊರತುಪಡಿಸಿ ಸಣ್ಣ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 140 ರಿಂದ 150 ರೂ.ರವರೆಗೆ ಪಾವತಿಸಬೇಕಿದೆ. ಹಾಪ್​ಕಾಮ್ಸ್​ನಲ್ಲಿ ಉತ್ತಮ ಗುಣಮಟ್ಟದ ದಪ್ಪ ಈರುಳ್ಳಿ ಕೆ.ಜಿ.ಗೆ 135 ರೂ. ಇದೆ. ಸಾಧಾರಣ ಗಾತ್ರದ ಈರುಳ್ಳಿಯನ್ನು 125 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಚಿಲ್ಲರೆ ವ್ಯಾಪಾರಸ್ಥರಿಗಾಗಿ ಕಡಿಮೆ ಗುಣಮಟ್ಟದ (ಗೊಲ್ಟಾ ಗೊಲ್ಟಿ ) ಈರುಳ್ಳಿ 50 ರಿಂದ 80 ರೂ.ರವರೆಗೆ ಮಾರಾಟ ಮಾಡಲಾಗುತ್ತಿದೆ.

ಕೃಷಿ ಉತ್ಪನ್ನ ಮಾರುಕಟ್ಟೆಗೆ ಈಜಿಪ್ಟ್, ಟರ್ಕಿಯಿಂದ 10 ರಿಂದ 15 ಲಾರಿ, ಮಹಾರಾಷ್ಟ್ರ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಹೊಸ ಈರುಳ್ಳಿ 150ಕ್ಕೂ ಅಧಿಕ ಲಾರಿಗಳು ಸೇರಿ ಸೋಮವಾರ ಒಟ್ಟು 175 ಕ್ಕೂ ಅಧಿಕ ಲಾರಿಗಳಲ್ಲಿ 35 ಸಾವಿರ ಚೀಲ ಈರುಳ್ಳಿ ಆವಕವಾಗಿದೆ. ಆವಕ ಪ್ರಮಾಣದಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಈರುಳ್ಳಿ ದರದಲ್ಲಿ ತುಸು ಏರಿಕೆಯಾಗಿದೆ ಎಂದು ವರ್ತಕ ರವಿಶಂಕರ್ ಮಾಹಿತಿ ನೀಡಿದ್ದಾರೆ.

Comments are closed.