ಅಂತರಾಷ್ಟ್ರೀಯ

ಈತ ತನ್ನ ಪತ್ನಿಗಾಗಿ ಮಾಡಿದ ಈ ಒಂದು ಒಳ್ಳೆಯ ಕೆಲಸಕ್ಕೆ ಬಂತು ಮೆಚ್ಚುಗೆಯ ಮಹಾಪೂರ ! ಈ ವೀಡಿಯೊ ನೋಡಿ…

Pinterest LinkedIn Tumblr

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ.ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಆ ವಿಡಿಯೋದಲ್ಲಿ ಗರ್ಭಿಣಿ ಪತ್ನಿಗೆ ತಾನೇ ಬಾಗಿ ಕುಳಿತು ಕುರ್ಚಿಯಾಗುತ್ತಾನೆ. ಈ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪತಿಯೊಂದಿಗೆ ಆಸ್ಪತ್ರೆಗೆ ಆಗಮಿಸಿದ ತುಂಬು ಗರ್ಭಿಣಿಗೆ ನಿಲ್ಲಲ್ಲು ಸಾಧ್ಯವಾಗುತ್ತಿಲ್ಲ. ಗೋಡೆ ಹಿಡಿದು ನಿಲ್ಲಲ್ಲು ಪರದಾಡುತ್ತಾಳೆ. ಆಗ ಆಕೆಯ ಗಂಡ ನೆಲದ ಮೇಲೆ ಕುಳಿತುಕೊಂಡು ಆಕೆಗೆ ಕುರ್ಚಿಯಾಗುತ್ತಾನೆ. ಆಕೆ ಆತನ ಬೆನ್ನ ಮೇಲೆ ಕುಳಿತುಕೊಳ್ಳುತ್ತಾಳೆ.

ಇಂತಹ ಹೃದಯಸ್ಪರ್ಶಿ ವಿಡಿಯೋಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು ಕೆಲವರು ಈ ಬಗ್ಗೆ ಕಮೆಂಟಿಸಿ, ಪಕ್ಕದಲ್ಲೆ ಬೆಂಚಿನ ಮೇಲೆ ಕುಳಿತಿರುವ ಮಂದಿ ಬಗ್ಗೆ ಅಸಮಾಧಾನ ವ್ಯಕ್ತಪಡಿದ್ದಾರೆ. ಕಣ್ಣ ಎದುರೇ ತುಂಬು ಗರ್ಭಿಣಿ ಪಡಿಪಾಟಲು ಕಂಡರೂ ಕುಳಿತುಕೊಳ್ಳಲು ಸ್ಥಳ ನೀಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.