ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಶೀಘ್ರವೇ ಚುನಾವಣೆ; ಲೆಫ್ಟಿನೆಂಟ್ ಗವರ್ನರ್

Pinterest LinkedIn Tumblr


ಜಮ್ಮು: ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಶೀಘ್ರವೇ ಚುನಾವಣೆ ನಡೆಯಲಿದೆ ಎಂದು ಜಮ್ಮು-ಕಾಶ್ಮೀರ್ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಜಮ್ಮು ಪ್ರದೇಶದ ಟಾಲ್ವಾರದಲ್ಲಿ ಪಾಸಿಂಗ್ ಔಟ್ ಪೊಲೀಸ್ ಪರೇಡ್ ಅನ್ನು ಉದ್ದೇಶಿಸಿ ಮಾತನಾಡುವ ವೇಳೆ ಹೇಳಿದರು.

ಚುನಾವಣೆ ಸಂಬಂಧಿ ಪ್ರಕ್ರಿಯೆಗಳು ಈಗಾಗಲೇ ಆರಂಭಗೊಂಡಿದೆ ಎಂದರು. ಇದೊಂದು ಲೋಕಸಭಾ ಚುನಾವಣೆ ರೀತಿಯೇ ನಡೆಯಲಿದೆ. ಜನರು ಕೂಡಾ ವಿಧಾನಸಭೆ ಚುನಾವಣೆ ಮಾದರಿಯಲ್ಲಿಯೇ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದರು.

Comments are closed.