ರಾಷ್ಟ್ರೀಯ

‘ನಾನು ಕೂಡ ಚೌಕಿದಾರ’ ಪ್ರತಿಜ್ಞೆಯನ್ನು ನೀವು ಕೂಡ ಕೈಗೊಳ್ಳಿ: ಜನತೆಗೆ ಪ್ರಧಾನಿ ಮೋದಿ ಕರೆ

Pinterest LinkedIn Tumblr

ನವದೆಹಲಿ: ನಾನು ಕೂಡ ಚೌಕಿದಾರ(ಕಾವಲುಗಾರ) ಪ್ರತಿಜ್ಞೆಯನ್ನು ನೀವು ಕೂಡ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಬೆಂಬಲಿಗರನ್ನು ಮತ್ತು ಒಟ್ಟಾರೆಯಾಗಿ ದೇಶದ ಪ್ರಜೆಗಳಿಗೆ ಒತ್ತಾಯಿಸಿದ್ದಾರೆ. ಸಮಾಜದ ಕೆಡುಕುಗಳು ಮತ್ತು ಅನ್ಯಾಯಗಳ ವಿರುದ್ಧ ಹೋರಾಡುವುದರಲ್ಲಿ ತಾವು ಒಬ್ಬಂಟಿಯಲ್ಲ ಎಂದಿದ್ದಾರೆ.

ನಿಮ್ಮ ಚೌಕಿದಾರ ದೃಢವಾಗಿ ನಿಂತಿದ್ದು ದೇಶಸೇವೆಯಲ್ಲಿ ತೊಡಗಿದ್ದಾರೆ. ಆದರೆ ಇಲ್ಲಿ ನಾನು ಏಕಾಂಗಿಯಲ್ಲ, ಸಮಾಜದಲ್ಲಿ ಭ್ರಷ್ಟಾಚಾರ, ಕೆಟ್ಟ ಶಕ್ತಿಗಳು, ಕೆಡುಕು, ಅನ್ಯಾಯಗಳ ವಿರುದ್ಧ ಹೋರಾಡುವ ಪ್ರತಿಯೊಬ್ಬರೂ, ಭಾರತದ ಅಭಿವೃದ್ಧಿಗೆ ಕಷ್ಟಪಟ್ಟು ಕೆಲಸ ಮಾಡುವ ಪ್ರತಿಯೊಬ್ಬರು ಕೂಡ ಚೌಕಿದಾರರು. ಇಂದು ಪ್ರತಿಯೊಬ್ಬ ಭಾರತೀಯ ಕೂಡ ನಾನು ಕೂಡ ಚೌಕಿದಾರ ಎಂದು ಹೇಳಿಕೊಳ್ಳಬೇಕು ಎಂದಿದ್ದಾರೆ.

ತಮ್ಮ ಸಂದೇಶವನ್ನು ಹೊತ್ತ ಸುಮಾರು 3 ನಿಮಿಷದ ವಿಡಿಯೊವನ್ನು ಕೂಡ ಪ್ರಧಾನಿ ಪೋಸ್ಟ್ ಮಾಡಿದ್ದಾರೆ.

ಮೋದಿಯವರು ತಮ್ಮನ್ನು ತಾವೇ ಚೌಕಿದಾರ ಎಂದು ಕರೆದುಕೊಂಡಿದ್ದು, ಚೌಕಿದಾರನಾದವನು ತನ್ನನ್ನು ಎಂದಿಗೂ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವುದಿಲ್ಲ ಮತ್ತು ಬೇರೆಯವರ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ.

ಚೌಕಿದಾರ ಎಂಬ ಪ್ರಧಾನಿ ಪದಕ್ಕೆ ಕಾಂಗ್ರೆಸ್ ಟೀಕಿಸುತ್ತಲೇ ಬಂದಿದೆ. ಚೌಕಿದಾರ ಕಳ್ಳ ಎಂದು ಮೋದಿಯವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕುಟುಕುತ್ತಲೇ ಬಂದಿದ್ದಾರೆ. ಅದರಲ್ಲೂ ಮುಖ್ಯವಾಗಿ ಫ್ರಾನ್ಸ್ ನೊಂದಿಗೆ ಮಾಡಿಕೊಂಡಿರುವ ರಫೆಲ್ ಒಪ್ಪಂದದಲ್ಲಿ ಪ್ರಧಾನಿ ಮೋದಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸುತ್ತಲೇ ಇದ್ದಾರೆ.

Comments are closed.