ಮನೋರಂಜನೆ

ನನ್ನ ಗಂಡ ಫಸ್ಟ್ ಹ್ಯಾಂಡ್ ಅಲ್ಲ ಎಂದು ಜನರ ಹುಬ್ಬೇರಿಸುವಂತೆ ಉತ್ತರ ನೀಡಿದ ನೀಲಿ ಚಿತ್ರತಾರೆ ಸ್ವಾತಿ

Pinterest LinkedIn Tumblr

ತೆಲುಗು ನೆಲದಲ್ಲಿ ನೀಲಿ ಚಿತ್ರಗಳಲ್ಲಿ ನಟಿಸಿ ಆ ಮೂಲಕ ಹೆಸರು ಮಾಡಿರುವ ನಟಿ ಸ್ವಾತಿ ನಾಯ್ಡು, ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಮ್ಮೆ ಈ ನಟಿ, “ಮದುವೆ ಬಳಿಕವೂ ನಾನು ಪೋರ್ನ್ ಚಿತ್ರಗಳಲ್ಲಿ ನಟಿಸುತ್ತೇನೆ” ಎಂದು ಹೇಳಿ ಬಹಳಷ್ಟು ಜನರ ಹುಬ್ಬೇರಿಸುವಂತೆ ಮಾಡಿದ್ದರು.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ನಟಿ ಸ್ವಾತಿ ನಾಯ್ಡು ಅವರಿಗೆ ‘ಕನ್ಯತ್ವ’ದ ಬಗ್ಗೆ ಪ್ರಶ್ನಿಸಿದಾಗ ಅವರು ತುಂಬಾ ಬೋಲ್ಡ್ ಆಗಿಯೇ ಉತ್ತರಿಸಿದ್ದರು. ಇದೀಗ ಅವರ ಗಂಡನ ಬಗ್ಗೆಯೂ ಅದೇ ರೀತಿ ಸಖತ್ ಬೋಲ್ಡ್ ಆಗಿಯೇ ಉತ್ತರ ಕೊಟ್ಟಿದ್ದಾರೆ.

ನಟಿ ಸ್ವಾತಿ ಅವರಿಗೆ, ‘ನಿಮ್ಮ ಪತಿ ವರ್ಜಿನ್ನಾ?’ ಎಂದು ಕೇಳಿದಾಗ, ನಟಿ ಸ್ವಾತಿ ನಾಯ್ಡು “No Way… ನನ್ನ ಗಂಡ ವರ್ಜಿನ್ ಅಲ್ಲ. ಮದುವೆಗೂ ಮುನ್ನವೇ ಅವರಿಗೆ ಹಲವಾರು ಸಂಬಂಧಗಳಿದ್ದವು. ಅವೆಲ್ಲ ನನಗೆ ಗೊತ್ತು” ಎಂದಿದ್ದಾರೆ. ಅಷ್ಟೇ ಅಲ್ಲ ಆ ಬಗ್ಗೆ ಮುಂದುವರಿದೆ ನಟಿ ಇನ್ನೂ ಒಂದು ಮಾತನ್ನು ಸೇರಿಸಿದ್ದಾರೆ.

“ವರ್ಜಿನಿಟಿ ಬಗ್ಗೆ ಗಂಡಸರು ಮಾತನಾಡಿದರೆ ಅದನ್ನು ನಂಬುವುದು ಕಷ್ಟ. ನಂಬುವುದು ಒಳ್ಳೆಯದೂ ಅಲ್ಲ. ಅವರು ಹೇಳುವುದೆಲ್ಲವೂ ಬಹುತೇಕ ಸುಳ್ಳು. ಅಷ್ಟಕ್ಕೂ ಗಂಡಸರಿಗೆ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಬರುವುದೇ ಇಲ್ಲ. ತಮಗೆ ಅನ್ನಿಸಿದ್ದನ್ನು ತಕ್ಷಣ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿಬಿಡುತ್ತಾರೆ” ಎಂದು ಹೇಳಿದ್ದಾರೆ.

ಅಂದಹಾಗೆ, ನಟಿ ಸ್ವಾತಿ ವಿವಾಹಕ್ಕೂ ಮೊದಲು, ಸುಮಾರು 8 ತಿಂಗಳು ‘ಲಿವ್ ಇನ್ ರಿಲೇಷನ್’ನಲ್ಲಿಸದ್ದರು ಎಂಬುದು ಗಮನಿಸಬೇಕಾದ ಅಂಶ.

Comments are closed.