ಅಹಮದಾಬಾದ್: ಗುಜರಾತ್‌ನ ಕಾಂಗ್ರೆಸ್ ಶಾಸಕ ವಲ್ಲಭ ಧಾರಾವಿಯಾ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇದರೊಂದಿಗೆ ಕಳೆದ 4 ದಿನಗಳಲ್ಲಿ ಕಾಂಗ್ರೆಸ್‌ನ 3ನೇ ಶಾಸಕ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದಂತೆ ಆಗಿದೆ. ಇದಕ್ಕೂ ಮುನ್ನ ಶಾಸಕ ಪುರುಸೋತ್ತಮ ಸಾಬರಿಯಾ ಹಾಗೂ ಜವಾಹರ ಚಾವಡಾ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರು.
ಈ ಪೈಕಿ ಚಾವಡಾ ಮಾ.9ರಂದು ಸಿಎಂ ವಿಜಯ್ ರೂಪಾನಿ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈಗ 182ಸದಸ್ಯತ್ವದ ವಿಧಾನಸಭೆಯಲ್ಲಿ 100 ಬಿಜೆಪಿ, 71ಕಾಂಗ್ರೆಸ್ ಶಾಸಕರು ಇದ್ದಾರೆ.
ಧಾರಾವಿಯಾ ಜಮ್ನಾನಗರ್ ಶಾಸಕರಾಗಿದ್ದರು. ಇವರು ಮೊದಲು ಬಿಜೆಪಿ ಪಾಳಯದಲ್ಲೇ ಇದ್ದರು. ನಂತರ 2017 ರ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಸೇರಿದ್ದರು. ಇದೀಗ ಮತ್ತೆ ಬಿಜೆಪಿ ಸೇರುತ್ತಿದ್ದಾರೆ.
Comments are closed.