ರಾಷ್ಟ್ರೀಯ

ಕೇಂದ್ರದ ವಿರುದ್ಧ ಧರಣಿ ಅಂತ್ಯಗೊಳಿಸಿದ ಮಮತಾ ಬ್ಯಾನರ್ಜಿ

Pinterest LinkedIn Tumblr


ಕೊಲ್ಕತ್ತ: ರಾಜ್ಯ ಪೊಲೀಸ್ ಅಧಿಕಾರಿ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ಕ್ರಮವನ್ನು ಖಂಡಿಸಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದ ಮೂರು ದಿನಗಳಿಂದ ಆರಂಭಿಸಿದ್ದ ಧರಣಿಯನ್ನು ಇಂದು ಸಂಜೆ ಅಂತ್ಯಗೊಳಿಸಿದರು. ಅಲ್ಲದೇ, ಮುಂದಿನ ವಾರ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಸುಪ್ರೀಂಕೋರ್ಟ್​ ನೀಡಿದ ಆದೇಶ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು ಎಂದು ಮಮತಾ ಬ್ಯಾನರ್ಜಿ ಹೇಳಿಕೊಂಡಿದ್ದಾರೆ.

ಧರಣಿ ಅಂತ್ಯಗೊಳಿಸುವಂತೆ ವಿರೋಧ ಪಕ್ಷಗಳ ನಾಯಕರು ದೂರವಾಣಿ ಕರೆ ಮಾಡಿ ಮನವಿ ಮಾಡಿಕೊಂಡಿದ್ದರು. ಮೈತ್ರಿಯಲ್ಲಿ ಒಂದಾದ ಟಿಎಂಸಿ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇಂದು ಬ್ಯಾನರ್ಜಿ ಅವರೊಂದಿಗೆ ಧರಣಿ ವೇದಿಕೆ ಹಂಚಿಕೊಂಡು, ಹೋರಾಟ ಕೈಬಿಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 46 ಗಂಟೆಗಳ ಧರಣಿಯನ್ನು ಮಮತಾ ಬ್ಯಾನರ್ಜಿ ಹಂತೆಗೆದುಕೊಂಡರು.

ಮಮತಾ ಬ್ಯಾನರ್ಜಿ ಹೋರಾಟದಲ್ಲಿ ಇಂದು ಜೊತೆಯಾದ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬಂಗಾಳ ಸಿಎಂ ಮಮತಾ ವಿರೋಧ ಪಕ್ಷಗಳ ಪ್ರಮುಖವಾದ ಮುಖ ಎಂದು ಬಣ್ಣಿಸಿ, ತಮ್ಮ ಟಿಎಂಸಿ ಪಕ್ಷವೂ 42 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ ಎಂದು ಹೇಳಿದರು. ಎನ್​ಡಿಎ ಸರ್ಕಾರ ಇಡೀ ದೇಶವನ್ನು ಇಬ್ಭಾಗ ಮಾಡಲು ಯತ್ನಿಸುತ್ತಿದೆ. ನಾವು ದೇಶವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಹೋರಾಟವನ್ನು ನಾವು ಇಲ್ಲಿಗೆ ನಿಲ್ಲಿಸುವುದಿಲ್ಲ. ಮುಂದಿನ ವಾರ ನಾವು ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ ಮಮತಾ ಬ್ಯಾನರ್ಜಿ, ಸುಪ್ರೀಂಕೋರ್ಟ್​ ತೀರ್ಪು ನಮಗೆ ಸಿಕ್ಕ ಗೆಲುವು. ಪ್ರಜಾಪ್ರಭುತ್ವಕ್ಕೆ ಸಿಕ್ಕ ಗೆಲುವು ಎಂದು ಹೇಳಿದರು.

Comments are closed.