ಕರ್ನಾಟಕ

ಸಿಎಲ್​ಪಿ ಸಭೆಗೆ ಗೈರಾದ ಬಂಡಾಯ ಶಾಸಕರಿಗೆ ಮೂರನೇ ನೋಟಿಸ್​ ಜಾರಿ ಮಾಡಿದ ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾಗಿದ್ದ ಬಂಡಾಯ ಶಾಸಕರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೊಟೀಸ್ ನೀಡಿದ್ದಾರೆ.

ಕಳೆದ ಜನವರಿ 21 ರಂದು ಕರೆದ ಶಾಸಕಾಂಗ ಸಭೆಗೆ ಗೈರಾಗಿದ್ದಕ್ಕೆ ಬಂಡಾಯ ಶಾಸಕರು ವಿವರಣೆ ನೀಡಿದ್ದರು ಎನ್ನಲಾಗಿದೆ. ವಿವರಣೆ ಬಳಿಕವೂ ಖುದ್ದು ಭೇಟಿ ಆಗಿ ಕಾರಣ ನೀಡುವಂತೆ ಸೂಚಿಸಲಾಗಿತ್ತು. ಆದರೆ ಇದೂವರೆಗೂ ಖುದ್ದು ಭೇಟಿ ಆಗಿ ವಿವರಣೆ ನೀಡದ ಬಂಡಾಯ ಶಾಸಕರಾದ ರಮೇಶ್ ಜಾರಕಿಹೊಳಿ‌, ಬಿ.ನಾಗೇಂದ್ರ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ ಅವರಿಗೆ ಇದೀಗ ನಾಳೆ ನಾಳೆ ಅಧಿವೇಶನ ಆರಂಭ ಆಗುವುದರೊಳಗೆ ಭೇಟಿ ಆಗಿ, ವಿವರಣೆ ನೀಡುವಂತೆ ಶಾಸಕಾಂಗ ನಾಯಕ ಸಿದ್ದರಾಮಯ್ಯ ನೋಟಿಸ್ ಜಾರಿ ಮಾಡಿದ್ದಾರೆ. ಇದು ಬಂಡಾಯ ಶಾಸಕರಿಗೆ ನೀಡಿದ ಮೂರನೇ ನೋಟಿಸ್ ಆಗಿದೆ.

ಶಾಸಕ ಉಮೇಶ್ ಜಾದವ್ ಅವರಿಗೆ ಕೊಟ್ಟ ನೊಟೀಸ್
ಆಪರೇಷನ್​ ಕಮಲದ ದಾಳಕ್ಕೆ ಸಿಲುಕಿರುವ ತಮ್ಮ ಪಕ್ಷದ ಶಾಸಕರನ್ನು ಹೇಗಾದರೂ ಮನವೊಲಿಕೆ ಮಾಡಬೇಕೆಂಬ ಉದ್ದೇಶದಿಂದ ವಿಪ್​ ಜಾರಿಗೊಳಿಸಿದ್ದ ರಾಜ್ಯ ಕಾಂಗ್ರೆಸ್​ ನಾಯಕರು ಬಳಿಕ ತಮ್ಮೆಲ್ಲ ಶಾಸಕರನ್ನೂ ಈಗಲ್ಟನ್​ ರೆಸಾರ್ಟ್​ಗೆ ಕರೆದುಕೊಂಡು ಹೋಗಿದ್ದರು. ವಿಪ್​ ಜಾರಿಯಾಗಿದ್ದರೂ ಅಂದಿನ ಸಭೆಯಲ್ಲಿ ನಾಲ್ವರು ಶಾಸಕರು ಪಾಲ್ಗೊಂಡಿರಲಿಲ್ಲ. ಬಳಿಕ, ಶನಿವಾರ ಈಗಲ್ಟನ್​ ರೆಸಾರ್ಟ್​ನಲ್ಲಿಯೇ ಸಿಎಲ್​ಪಿ ಸಭೆಯನ್ನು ಕರೆಯಲಾಗಿತ್ತು. ಅಂದಿನ ಸಭೆಗೂ ಆಗಮಿಸದ ಶಾಸಕರಾದ ರಮೇಶ್​ ಜಾರಕಿಹೊಳಿ ಮತ್ತು ಮಹೇಶ್​ ಕುಮಟಳ್ಳಿ ಅವರಿಗೆ ನೋಟಿಸ್​ ಜಾರಿ ಮಾಡಲಾಗಿತ್ತು.

Comments are closed.