ರಾಷ್ಟ್ರೀಯ

33 ವಸ್ತುಗಳ ಬೆಲೆ ಇಳಿಕೆ: ಕೇಂದ್ರದಿಂದ ಕ್ರಿಸ್​ಮಸ್​ ಉಡುಗೊರೆ

Pinterest LinkedIn Tumblr


ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) 31ನೇ ಪರಿಷತ್​ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶನಿವಾರ ನಡೆದ ಸಭೆಯಲ್ಲಿ ಒಟ್ಟೂ 33 ವಸ್ತುಗಳ ತೆರಿಗೆಯನ್ನು ಶೇಕಡ 18ರಿಂದ ಶೇ. 12 ಮತ್ತು ಶೇ. 5ಕ್ಕೆ ಇಳಿಸಲು ಮುಂದಾಗಿದೆ. ಈ ಮೂಲಕ 33 ವಸ್ತುಗಳು ಮೊದಲಿಗಿಂತ ಕಡಿಮೆ ಬೆಲೆಗೆ ಸಿಗಲಿದ್ದು ಗ್ರಾಹಕರಿಗೆ ಸಂತಸ ತರಲಿದೆ.

ಯಾವ ವಸ್ತು ಮತ್ತು ಸೇವೆಗಳ ಜಿಎಸ್​ಟಿ ಕಡಿಮೆಯಾಗಿದೆ ಎಂಬ ಮಾಹಿತಿ ಈ ಕೆಳಗಿದೆ.

1. ವೀಲ್​ಚೇರ್​ ಮೇಲಿನ ತೆರಿಗೆ ಶೇಕಡ 28ರಿಂದ ಶೇಕಡ 5ಕ್ಕೆ ಇಳಿಕೆ.

2. 32 ಇಂಚ್​ ಟಿವಿ ಮೇಲಿನ ತೆರಿಗೆ ಶೇಕಡ 28ರಿಂದ ಶೇಕಡ 5ಕ್ಕೆ ಇಳಿಕೆ.

3. ರೂ. 100 ಒಳಗಿನ ಸಿನೆಮಾ ಟಿಕೆಟ್​ ಶೇಕಡ 18ರಿಂದ ಶೇಕಡ 12ಕ್ಕೆ ಇಳಿಕೆ.

4. ರೂ. 100ಕ್ಕಿಂತ ಹೆಚ್ಚು ಮೌಲ್ಯದ ಸಿನೆಮಾ ಟಿಕೆಟ್​ ಮೇಲಿದ್ದ ಶೇಕಡ 28 ತೆರಿಗೆಯನ್ನು ಶೇಕಡ 18ಕ್ಕೆ ಇಳಿಕೆ.

5. ಮೂರನೇ ವ್ಯಕ್ತಿ ವಿಮೆ ಶೇಕಡ 12 ಕ್ಕೆ ಇಳಿಕೆ.

6. ಧಾರ್ಮಿಕ ಕ್ಷೇತ್ರಗಳ ಭೇಟಿಗೆ ಬಳಸುವ ವಿಮಾನಯಾನದ ದರ ಶೇಕಡ 5ಕ್ಕೆ ಇಳಿಕೆ. ಈ ಹಿಂದೆ ಎಕಾನಮಿ ಟಿಕೆಟ್​ಗೂ ಶೇಕಡ 28 ತೆರಿಗೆ ವಿಧಿಸಲಾಗಿತ್ತು.

ಇದನ್ನೂ ಓದಿ: ಕಡಿಮೆ ಬೆಲೆಗೆ ಸಿಗಲಿದೆ ಟಿವಿ, ವಿಡಿಯೋ ಗೇಮ್​, ಸಿನೆಮಾ ಟಿಕೆಟ್​; ಜಿಎಸ್​ಟಿ ಕಡಿತಗೊಳಿಸಿ ಕೇಂದ್ರ ಆದೇಶ

7. ಸೋಲಾರ್​ ಪೌಡರ್​ ತಯಾರಿಕಾ ಘಟಕದ ಮೇಲಿದ್ದ ತೆರಿಗೆ ಶೇಕಡ 5ಕ್ಕೆ ಇಳಿಕೆ.

8. ಶೇಕಡ 28ರ ವರ್ಗದಲ್ಲಿ ಇನ್ನೂ ಉಳಿದಿರುವ ವಸ್ತುಗಳು ಐಷಾರಾಮಿ ಕೆಟಗರಿಯಾಗಿದ್ದು, ಅವುಗಳ ತೆರಿಗೆಯಲ್ಲಿ ಇಳಿಕೆಯಿಲ್ಲ.

9. ಆಟೋ ಮೊಬೈಲ್​ ಬಿಡಿಭಾಗಗಳು ಮತ್ತು ಸಿಮೆಂಟ್​ಗೆ ಶೇಕಡ 28ರಷ್ಟು ತೆರಿಗೆ ಮುಂದುವರೆಸಲಾಗಿದೆ.

10. ಎಸಿ ಮತ್ತು ಡಿಶ್​ ವಾಶ್​ಗಳನ್ನು ಕೂಡ ಶೇಕಡ 28ರ ಸ್ಲಾಬ್​ನಲ್ಲೇ ಮುಂದುವರೆಯಲಿದೆ.

11. ಜನ್​ ಧನ್​ ಯೋಜನೆಯ ಖಾತೆದಾರರು ಮತ್ತು ಅವರಿಗೆ ಬ್ಯಾಂಕ್​ ನೀಡುತ್ತಿದ್ದ ಸೇವೆಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಲಾಗಿದೆ.

Comments are closed.