ರಾಷ್ಟ್ರೀಯ

ಹಜ್ರತ್ ನಿಜಾಮುದ್ದೀನ್ ದರ್ಗಾಗೆ ಮಹಿಳೆಯರ ಪ್ರವೇಶಕ್ಕೆ ಸಲ್ಲಿಸಿರುವ ಪಿಐಎಲ್ : ಕೇಂದ್ರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

Pinterest LinkedIn Tumblr

ದೆಹಲಿ: ಹಜ್ರತ್ ನಿಜಾಮುದ್ದೀನ್ ದರ್ಗಾಗೆ ಮಹಿಳೆಯರ ಪ್ರವೇಶಕ್ಕೆ ಸಲ್ಲಿಸಿರುವ ಪಿಐಎಲ್ ಸಂಬಂಧ ಕೇಂದ್ರ ಸರ್ಕಾರ ಹಾಗೂ ದೆಹಲಿಯ ಆಪ್ ಸರ್ಕಾರ ಮತ್ತು ಪೊಲೀಸರ ಪ್ರತಿಕ್ರಿಯೆ ನೀಡುವಂತೆ ದೆಹಲಿ ಹೈಕೋರ್ಟ್ ಸೂಚಿಸಿದೆ.

ಕೇಂದ್ರ ಸರ್ಕಾರವನ್ನು ಹೊರತು ಪಡಿಸಿ, ದೆಹಲಿ ಸರ್ಕಾರ, ಪೊಲೀಸರು ಹಾಗೂ ದರ್ಗಾದ ಆಡಳಿತ ಮಂಡಳಿಗೆ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಪೀಠ ನೊಟೀಸ್ ಕಳುಹಿಸಿದೆ.

ಮೂವರು ಮಹಿಳಾ ಕಾನೂನು ವಿದ್ಯಾರ್ಥಿಗಳು ದರ್ಗಾದೊಳಗೆ ಪ್ರವೇಶಿಸಲು ಅವಕಾಶ ನಿರಾಕರಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ನೊಟೀಸ್ ನೀಡಿದೆ.

ದರ್ಗಾ ಒಂದು ಧಾರ್ಮಿಕ ಆಚರಣೆ ಸ್ಥಳವಾಗಿದ್ದು ದರ್ಗಾದ ಹೊರಗಡೆ ನೋಟೀಸ್ ಹಾಕಿದ್ದು, ದರ್ಗಾ ಒಳಗೆ ಮಹಿಳೆಯರಿಗೆ ಪ್ರವೇಶ ಇಲ್ಲ ಎಂದು ಇಂಗ್ಗೀಷ್ ಮತ್ತು ಹಿಂದಿಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ ಎಂದು ವಕೀಲ ಕಮಲೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಮಹಿಳೆಯರ ದರ್ಗಾ ಪ್ರವೇಶ ನಿಷೇಧ ಸಂಬಂಧ ಕಾನೂನು ವಿದ್ಯಾರ್ಥಿಗಳು ಸಂಬಂಧ ಪಟ್ಟ ಪ್ರಾಧಿಕಾರ ಹಾಗೂ ಪೊಲೀಸರಿಗೆ ಮನವಿ ಸಲ್ಲಿಸಿದ್ದರೂ ಆದರೆ ಅದರಿಂದ ಯಾವುದೇ ಪ್ರಯೋಜನವಾಗದ ಕಾರಣ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

Comments are closed.