ಕರ್ನಾಟಕ

ಮಾಜಿ ಸಿಎಂ ಸಿದ್ದರಾಮಯ್ಯ ಸೋಲು ಅನುಭವಿಸಿದ್ದು ನನಗೆ ನನ್ನ ಸಾವಿಗಿಂತಲೂ ಹೆಚ್ಚು ನೋವು ಕೊಡುವ ವಿಷಯ: ರಮೇಶ್ ಕುಮಾರ್

Pinterest LinkedIn Tumblr

ಕೋಲಾರ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸೋಲು ಅನುಭವಿಸಿದ್ದು ನನಗೆ ನನ್ನ ಸಾವಿಗಿಂತಲೂ ಹೆಚ್ಚು ನೋವು ಕೊಡುವ ವಿಷಯ ಎಂದು ವಿಧಾನಸಭೆ ಅಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್ ಕಣ್ಣೀರು ಹಾಕಿದ್ದಾರೆ.

ಕೋಲಾರದಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಭಾವುಕರಾದ ಅವರು, ಕುರಿ ಕಾಯುವ ಸಮಾಜದಲ್ಲಿ ಹುಟ್ಟಿ 13 ಬಾರಿ ಬಜೆಟ್​ ಮಂಡಿಸಿ, ಎಲ್ಲ ಸಮಾಜದ ಒಳಿತಿಗಾಗಿ ಶ್ರಮಿಸಿರುವ ಸಿದ್ದರಾಮಯ್ಯನವರನ್ನು ಕೆಳಗೆ ಬೀಳಲು ಬಿಡಬಾರದು ಎಂದು ಹೇಳುತ್ತ ಕಂಬನಿ ಮಿಡಿದರು.

ಸತ್ಯ ಕಹಿಯಾಗಿರುತ್ತೆ, ಸತ್ಯ ಕಠಿಣವಾಗಿರುತ್ತೆ. ಆದರೆ ಸತ್ಯಕ್ಕೆ ಸಾವಿಲ್ಲ. ಕೊನೆಗೆ ಅದೇ ಗೆಲ್ಲುತ್ತೆ. ಬರಡು ಭೂಮಿಗೆ ನೀರು ಕೊಟ್ಟ ಭಗೀರಥ ಸಿದ್ಧರಾಮಯ್ಯ ಎಂದು ರಮೇಶ್ ಕುಮಾರ ಭಾವನಾತ್ಮಕವಾಗಿ ಮಾತನಾಡಿದರು.

ಸಿದ್ದರಾಮಯ್ಯ ಅವರ ಸೋಲನ್ನು ಎಂದಿಗೂ ನಾನು ಮರೆಯಲಾರೆ. ನನಗೆ ನನ್ನ ಸಾವಿಗಿಂತಲೂ ಅವರೆ ನನಗೆ ಹೆಚ್ಚು. ಆರೋಗ್ಯ ಸಚಿವನಾಗಿದ್ದಾಗ ನೀಡಿದ ಬೆಂಬಲ ಮರೆಯಲಾರೆ. ಅವರಿಗೆ ಪುತ್ರನನ್ನು ಕಳೆದುಕೊಂಡ ಸಮಯಕ್ಕಿಂತಲೂ ಹೆಚ್ಚು ನೋವನ್ನು ಚುನಾವಣೆ ಸೋಲು ನೀಡಿದೆ ಎಂದು ಹೇಳುವ ಮೂಲಕ ಬಾವುಕರಾಗಿ ಕಣ್ಣೀರು ಸುರಿಸಿದರು.

Comments are closed.