ಕರ್ನಾಟಕ

ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ತಿರಸ್ಕರಿಸಿದ ಕೇಂದ್ರ

Pinterest LinkedIn Tumblr

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಈ ಕುರಿತಂತೆ ಕೇಂದ್ರದ ಹೆಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ್ ನಾವಡ್ಗಿ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ನವೆಂಬರ್ 13ರಂದೇ “ನೋ” ಎಂದಿತ್ತು.ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸಹ ಮಾಹಿತಿ ರವಾನಿಸಲಾಗಿದೆ. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಹಾಗೂ ಗೃಹ ಇಲಾಖೆ ಈ ಪ್ರಸ್ತಾವ ತಿರಸ್ಕ್ರೈಸಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರ ಈ ಸಂಬಂಧ ನವೆಂಬರ್ ನಲ್ಲಿ ರಾಜ್ಯಕ್ಕೆ ಬರೆದ ಪತ್ರವನ್ನು ಸಹ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಲಿಂಗಾಯತ-ವೀರಶೈವರು ಹಿಂದೂ ಧರಮದ ಅವಿಭಾಜ್ಯ ಅಂಗವಾಗಿದ್ದಾರೆ.ಈ ಕುರಿತು ಇದಾಗಲೇ 1871ರ ಮೊದಲ ಜನಗಣತಿ ವರದಿಯಲ್ಲಿ ದಾಖಲಾಗಿದೆ. ಅಲ್ಲದೆ ಒಂದು ವೇಳೆ ರಾಜ್ಯದ ಪ್ರಸ್ತಾವನೆ ಒಪ್ಪಿಕೊಂಡಲ್ಲಿ ಇದಾಗಲೇ ಲಿಂಗಾಯತ-ವೀರಶೈವಸಮುದಾಯದಲ್ಲಿ ಪ. ಜಾತಿ, ಪ.ಪಂಗಡ ಸೌಲಭ್ಯ ಪಡೆಯುತ್ತಿರುವವರು ಇದರಿಂದ ವಂಚಿತರಾಗಲಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ವಿಚಾರ ಸಂಬಂಧ ರಾಜ್ಯ ಅಲ್ಪಸಂಖ್ಯಾತ ಆಯೋಗವು ಸಮಿತಿ ರಚನೆಗೆ ಶಿಫಾರಸು ಮಾಡಿದ್ದನ್ನು ಪ್ರಶ್ನಿಸಿಸಲ್ಲಿಕೆಯಾಗಿದ್ದ ನಾಲ್ಕು ಪಿಐಎಲ್ ಗಳನ್ನು ನ್ಯಾಯಾಲಯ ಸೋಮವಾರ ವಿಲೇವಾರಿ ಮಾಡಿದೆ.

ಪ್ರತಿಭಟನೆ ಎಚ್ಚರಿಕೆ; ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗೆ ಕೇಂದ್ರ ಸರ್ಕಾರ ಒಪ್ಪದ ಹಿನ್ನೆಲೆಯಲ್ಲಿ ಕೇಂದ್ರದ ವಿರುದ್ಧ ತೀವ್ರ ಸ್ವರೂಪದ ಪ್ರತಿಭಟನೆ ನದೆಸಲಾಗುತ್ತದೆ ಎಂದು ಲಿಂಗಾಯತ ಧರ್ಮ ಮಹಾಸಭೆ ಅಧ್ಯಕ್ಷೆ ಮಾತೆ ಮಹಾದೇವಿ ಎಚ್ಚರಿಕೆ ನೀಡಿದ್ದಾರೆ..

Comments are closed.