ರಾಷ್ಟ್ರೀಯ

ವಾಜಪೇಯಿಗೆ ಶ್ರದ್ಧಾಂಜಲಿ ಸಲ್ಲಿಸಲು ವಿರೋಧಿಸಿದ ಎಐಎಂಎಎಂ ಸದಸ್ಯನಿಗೆ ಥಳಿತ!

Pinterest LinkedIn Tumblr


ಔರಂಗಬಾದ್: ಔರಂಗಬಾದ್: ಅಜಾತಶತ್ರು, ಕವಿ ಹೃದಯಿ, ನವ ಭಾರತದ ಹರಿಕಾರ, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಎಎಂ) ಸದಸ್ಯನೊಬ್ಬ ವಿರೋಧ ವ್ಯಕ್ತಪಡಿಸಿದ್ದಾನೆ. ಇದರಿಂದ ಕುಪಿತಗೊಂಡ ಬಿಜೆಪಿ ಸದಸ್ಯರು ಎಐಎಂಎಎಂ ಸದಸ್ಯನಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಘಟನೆ ಮಹಾರಾಷ್ಟ್ರದದಲ್ಲಿ ನಡೆದಿದೆ.

ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ಜೌರಂಗಾಬಾದ್ ಪುರಸಭೆಯಲ್ಲಿ ಶ್ರದ್ದಾಂಜಲಿ ಅರ್ಪಿಸುವ ಸಭೆ ಕರೆಯಲಾಗಿತ್ತು. ಈ ವೇಳೆ ವಾಜಪೇಯಿ ಅವರಿಗೆ ಸಂತಾಪ ಸೂಚಿಸುವ ನಿಲುವಳಿ ಮಂಡಿಸಲಾಯಿತು. ಆದರೆ, ಈ ನಿಲುವಳಿಗೆ ಎಂಐಎಂ ಸದಸ್ಯನೊಬ್ಬ ವಿರೋಧ ವ್ಯಕ್ತಪಡಿಸಿದ್ದಾನೆ ಎಂದು ವರದಿಯಾಗಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (93) ಅವರು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ (ಆಗಸ್ಟ್‌ 16) ಕೊನೆಯುಸಿರೆಳೆದಿದ್ದರು. ಶುಕ್ರವಾರ ಸಂಜೆ ಹೊಸದಿಲ್ಲಿಯಲ್ಲಿರುವ ಯಮುನಾ ನದಿಯ ತಟದಲ್ಲಿರುವ ಸ್ಮೃತಿ ಸ್ಥಳದಲ್ಲಿ ವಾಜಪೇಯಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Comments are closed.