ಅಂತರಾಷ್ಟ್ರೀಯ

ವಿಧಿವಶರಾದ ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌

Pinterest LinkedIn Tumblr


ಜಿನೆವ: ನೋಬೆಲ್‌ ಪ್ರಶಸ್ತಿ ವಿಜೇತ, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ (80) ಶನಿವಾರ ನಿಧನರಾದರು.

ಕೋಫಿ ಅನ್ನಾನ್‌ ಕೆಲ ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಸ್ಸ್ವಿಟ್ಝರ್‌ಲ್ಯಾಂಡ್‌ನ‌ ಜೆನವಾದಲ್ಲಿನ ಕೋಫಿ ಅನ್ನಾನ್‌ ಕೊನೆಯುಸಿರೆಳೆದಿದ್ದಾರೆ.

ವಿಶ್ವಸಂಸ್ಥೆಯ ಮೊದಲ ಕಪ್ಪು ಪ್ರಧಾನ ಕಾರ್ಯದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರಿಗೆ 2001ರಲ್ಲಿ ನೋಬೆಲ್‌ ಪ್ರಶಸ್ತಿ ಸಿಕ್ಕಿತ್ತು. ಕೋಫಿ ಅನ್ನಾನ್‌ ಅವರ ಸಂಸ್ಥೆ, ಶನಿವಾರ ಅವರ ಸಾವಿನ ಸುದ್ದಿಯನ್ನು ಟ್ವಿಟರ್‌ ಮೂಲಕ ಖಚಿತಪಡಿಸಿದೆ.

ಸಹಾಯವನ್ನು ಕೇಳಿ ಬರುವವರಿಗೆ ಕೋಫಿ ಅನ್ನಾನ್‌ ಎಂದಿಗೂ ನಿರಾಶೆ ಮಾಡಿದವರಲ್ಲ. ಅವರ ಅಗಲಿಕೆ ಅತ್ಯಂತ ಬೇಸರ ತಂದಿದೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

1938ರ ಏಪ್ರಿಲ್‌ 8ರಂದು ಜನಿಸಿ ಅನ್ನಾನ್‌, ಸಿರಿಯಾ ಬಿಕ್ಕಟ್ಟು ಸೇರಿದಂತೆ ಅನೇಕ ಜಾಗತಿಕ ವಿದ್ಯಮಾನಗಳನ್ನು ಬಗೆಹರಿಸುವಲ್ಲಿ ವಿಶ್ವಸಂಸ್ಥೆಯ ಪ್ರತಿನಿಧಿಯಾಗಿದ್ದರು. ಯುಎನ್‌ ಎಕಾನಾಮಿಕ್‌ ಕಮಿಷನ್‌ ಫಾರ್‌ ಆಫ್ರಿಕಾ, ಜೆನವಾ ನಿರಾಶ್ರಿತರ ಕಚೇರಿ ಹೈ ಕಮಿಷನರ್‌ ಆಗಿಯೂ ಅವರು ಕೆಲಸ ಮಾಡಿದ್ದರು.

ಜಾಗತಿಕ ಮಟ್ಟದಲ್ಲಿ ಏಡ್ಸ್‌ ವಿರುದ್ಧ ಹೋರಾಡಲು ವಿಶ್ವ ಏಡ್ಸ್‌ ನಿಧಿ, ಯುಎನ್‌ನಿಂದ ಮೊತ್ತ ಮೊದಲ ಬಾರಿ ಭಯೋತ್ಪಾದನೆ ನಿಗ್ರಹಕ್ಕೆ ಯೋಜನೆ, ಕ್ಷಯ ಹಾಗೂ ಮಲೇರಿಯಾ ರೋಗ ತಡೆಗೆ ಯೋಜನೆಗಳನ್ನು ರೂಪಿಸಿದ್ದರು.

2006ರಲ್ಲಿ ಇಸ್ರೇಲ್‌ ಹಾಗೂ ಹೆಜ್‌ಬೊಲ್ಲ ಸುರಕ್ಷತೆಗೆ ಕೋಫಿ ಅನ್ನಾನ್‌ ಮಧ್ಯಸ್ಥಿಕೆ ವಹಿಸಿದ್ದರು. ಅಂತೆಯೇ ಕ್ಯಾಮ್‌ರೂನ್‌ ಹಾಗೂ ನೈಜೀರಿಯಾ ನಡುವೆ ಬಕಾಸಿ ಪೆನಿನ್ಸುಲಾ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ವಿಶ್ವಸಂಸ್ಥೆಯಲ್ಲಿ ಅವರ ಕೊನೆಯ ಕಾರ್ಯ ಇದಾಗಿತ್ತು.

Comments are closed.