ರಾಷ್ಟ್ರೀಯ

ಮಹಿಳಾ ಕರಾಟೆ ಪಟುವಿಗೆ ಲೈಂಗಿಕ ಕಿರುಕುಳ; ಕಾನ್‌ಸ್ಟೆಬಲ್‌ ಅರೆಸ್ಟ್‌

Pinterest LinkedIn Tumblr


ಚಂಡೀಗಢ : ರಾಷ್ಟ್ರ ಮಟ್ಟದ ಮಹಿಳಾ ಕರಾಟೆ ಪಟುವನ್ನು ರೋಹಟಕ್‌ನಲ್ಲಿ ಆಟೋ ರಿಕ್ಷಾದಲ್ಲಿ ಅತ್ಯಾಚಾರಗೈದ ಹರಿಯಾಣದ ಟ್ರಾಫಿಕ್‌ ಪೊಲೀಸ್‌ ಕಾನ್‌ಸ್ಟೆಬಲ್‌ ಯಾಸಿನ್‌ ಎಂಬಾತನನ್ನು ಬಂಧಿಸಲಾಗಿ ಅಮಾನತಿನಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

”ಗುರುವಾರ ರಾತ್ರಿ ನಾನು ಕರಾಟೆ ತರಗತಿ ಮುಗಿಸಿ ಮನೆಗೆ ಮರಳಲು ಆಟೋ ಹಿಡಿದಾಗ ಅದರೊಳಗೆ ಅದಾಗಲೇ ಆರೋಪಿ ಟ್ರಾಫಿಕ್‌ ಪೊಲೀಸ್‌ ಕಾನ್‌ಸ್ಟೆಬಲ್‌ ಕುಳಿತಿದ್ದ; ಆತನೊಂದಿಗೆ ರಿಕ್ಷಾ ಹಂಚಿಕೊಂಡ ನನ್ನನ್ನು ಆತ ಮಾರ್ಗ ಮಧ್ಯದಲ್ಲಿ ಅತ್ಯಾಚಾರ ಗೈದ” ಎಂದು 21ರ ಹರೆಯದ ಮಹಿಳಾ ಕರಾಟೆ ಪಟು ದೂರು ನೀಡಿದ್ದರು.

”ಪೊಲೀಸ್‌ ಸಮವಸ್ತ್ರದಲ್ಲಿದ್ದ ಹೊರತಾಗಿಯೂ ಆರೋಪಿ ಕಾನ್‌ಸ್ಟೆಬಲ್‌ ಪ್ರಯಾಣದ ಉದ್ದಕ್ಕೂ ನನಗೆ ಲೈಂಗಿಕ ಕಿರುಕುಳ ನೀಡಿದ; ಮೊದಲಲ್ಲಿ ಆತ ನನ್ನನ್ನು ಮಾತಿಗೆ ಎಳೆದ; ನಾನು ಮಾತನಾಡಲು ನಿರಾಕರಿಸಿದೆ; ಬಳಿಕ ಆತ ನನ್ನ ಮೈ ಮುಟ್ಟಲು ತೊಡಗಿದ. ನಾನು ಸಿಟ್ಟಿನಿಂದ ಆಟೋ ಚಾಲಕನಿಗೆ ಸಮೀಪದ ಪೊಲೀಸ್‌ ಠಾಣೆ ಆಟೋವನ್ನು ಚಲಾಯಿಸುವಂತೆ ಕೇಳಿಕೊಂಡೆ. ಆತ ಹಾಗೆಯೇ ಮಾಡಿದ. ಅದು ಮಹಿಳಾ ಪೊಲೀಸಣ ಠಾಣೆಯಾಗಿತ್ತು. ಅಲ್ಲಿದ್ದ ಹಿರಿಯ ಮಹಿಳಾ ಪೊಲೀಸ್‌ ಅಧಿಕಾರಿ ನನಗೆ ನೆರವಾಗಲಿಲ್ಲ; ಆರೋಪಿ ಕಾನ್‌ಸ್ಟೆಬಲ್‌ಗೆ ಬುದ್ದಿಮಾತು ಹೇಳುವಾಗಿ ನುಡಿದಳು” ಎಂದು ಮಹಿಳಾ ಕರಾಟೆಪಟು ದೂರಿನಲ್ಲಿ ಹೇಳಿದ್ದಾರೆ.

ಈ ವಿಷಯ ರೋಹಟಕ್‌ ಎಸ್‌ಪಿ ಪಂಕಜ್‌ ನೈನ್‌ ಅವರ ಗಮನಕ್ಕೆ ಬಂದಾಗ ಅವರು ಆರೋಪಿ ಕಾನ್‌ಸ್ಟೆಬಲ್‌ ವಿರುದ್ಧ ಎಫ್ಐಆರ್‌ ದಾಖಲಿಸಲು ಸೂಚಿಸಿದರು ಎಂದು ವರದಿಗಳು ತಿಲಿಸಿವೆ.

-ಉದಯವಾಣಿ

Comments are closed.