ರಾಷ್ಟ್ರೀಯ

ಮತಾಂತರಕ್ಕೆ ಒಲ್ಲದ ಹಿಂದು ಪತ್ನಿಯ ನಗ್ನ ಫೋಟೋ ಇಂಟರ್‌ನೆಟ್‌ಗೆ

Pinterest LinkedIn Tumblr


ಪಂಚಕುಲ, ಹರಿಯಾಣ : ಇಸ್ಲಾಂ ಧರ್ಮಕ್ಕೆ ಮತಾಂತರವಾಗಲು ಒಪ್ಪದ ತನ್ನ ಹಿಂದೂ ಮಡದಿಯ ನಗ್ನ ಫೋಟೋಗಳನ್ನು, ಮುಸ್ಲಿಂ ಪತಿಯೋರ್ವ, ತನ್ನ ಗೆಳೆಯನೊಂದಿಗೆ ಸೇರಿಕೊಂಡು, ಇಂಟರ್‌ನೆಟ್‌ಗೆ ಅಪ್‌ಲೋಡ್‌ ಮಾಡಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ.

ಹಿಂದು ಮಹಿಳೆಯ ಜತೆಗೆ ಆರೋಪಿ ಮುಸ್ಲಿಂ ಪುರುಷನ ಮದುವೆ ನಡೆದು ಎಷ್ಟು ಸಮಯವಾಗಿದೆ ಎಂಬುದು ಸ್ಪಷ್ಟವಿಲ್ಲ.

‘ಇಸ್ಲಾಂ ಧರ್ಮಕ್ಕೆ ಮತಾಂತರವಾಗದಿದ್ದರೆ ನಿನಗೆ ತಲಾಕ್‌ ನೀಡುತ್ತೇನೆ’ ಎಂದು ಮುಸ್ಲಿಂ ಪತಿಯು ತನ್ನ ಹಿಂದೂ ಪತ್ನಿಗೆ ಆಗೀಗ ಎಂಬತ್ತ ಬೆದರಿಸುತ್ತಲೇ ಇದ್ದ ಎನ್ನಲಾಗಿದೆ.

ತನ್ನ ಯಾವ ಬೆದರಿಕೆಗಳಿಗೂ ಆಕೆ ಮಣಿಯದಿದ್ದಾಗ, ಆತ ಕೊನೆಗೆ ತನ್ನ ಗೆಳೆಯನ ಜತೆಗೆ ಸೇರಿಕೊಂಡು ತನ್ನ ಹಿಂದು ಪತ್ನಿಯ ನಗ್ನ ಫೋಟೋಗಳನ್ನು ಇಂಟರ್‌ನೆಟ್‌ಗೆ ಅಪ್‌ಲೋಡ್‌ ಮಾಡಿದ ಎಂದು ಪ್ರಕರಣದ ವಿವರ ನೀಡಿರುವ ಪೊಲೀಸರು ಈ ಕೇಸಿಗೆ ಸಂಬಂಧಿಸಿ ತಾವು ಒಬ್ಬ ಆರೋಪಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಮತಾಂತರಕ್ಕೆ ಬಲವಂತ ಮಾಡಿದ ದೂರು ನಮಗೆ ಬಂದಿಲ್ಲ; ನಗ್ನ ಫೋಟೋಗಳನ್ನು ಇಂಟರ್‌ನೆಟ್‌ಗೆ ಅಪ್‌ಲೋಡ್‌ ಮಾಡಲಾದ ಬಗ್ಗೆ ದೂರು ಬಂದಿದೆ ಎಂದು ಹರಿಯಾಣ ಪೊಲೀಸರು ಹೇಳಿದ್ದಾರೆ.

-ಉದಯವಾಣಿ

Comments are closed.