ರಾಷ್ಟ್ರೀಯ

ರಷ್ಯಾ ಬಾಲಕನಿಗೆ ಹೊಂದಿಕೆಯಾದ ‘ತಿರಸ್ಕೃತ’ ಹೃದಯ

Pinterest LinkedIn Tumblr


ಚೆನ್ನೈ: ಶೇ.35ರಷ್ಟು ಮಾತ್ರ ಕೆಲಸ ಮಾಡುತ್ತಿದ್ದ ದಾನಿಯೊಬ್ಬರ ಹೃದಯವನ್ನು ತಮ್ಮ ರೋಗಿಗಳಿಗೆ ಜೋಡಣೆ ಮಾಡಲು ಎಲ್ಲಾ ವೈದ್ಯರೂ ತಿರಸ್ಕರಿಸಿದ್ದರು. ಆದರೆ ರಷ್ಯಾದ ಎಕಟೆರಿನಾ ಎಂಬ ತಾಯಿಯೊಬ್ಬರು ಹೃದ್ರೋಗದಿಂದ ಬಳಲುತ್ತಿದ್ದ ತನ್ನ ಎಂಟು ವರ್ಷದ ಮಗ ರೋಮನ್‌ಗೆ ಅದೇ ಹೃದಯ ಪ್ರಯತ್ನಿಸೋಣ ಎಂದು ಧೈರ್ಯ ಮಾಡಿದರು.

ಆ ಹೃದಯವನ್ನು ಜೋಡಣೆ ಮಾಡಲು ಸಾಕಷ್ಟು ತೊಡಕುಗಳಿದ್ದವು. ಭಾರತದಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ರಷ್ಯಾ ಸರಕಾರ ಅವರಿಗೆ ಅನುಮತಿ ನೀಡಿತ್ತು. ಆದರೆ ದಾನಿ ವಯಸ್ಕರಾಗಿದ್ದ ಕಾರಣ ಆ ಹೃದಯ ಬಾಲಕನಿಗೆ ದೊಡ್ಡದಾಗಿತ್ತು. ಮುಖ್ಯವಾಗಿ ಅದು ಶೇ.35ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಎಲ್ಲ ವೈದ್ಯರು ಈ ಹೃದಯವನ್ನು ತಿರಸ್ಕರಿಸಿದ್ದರು ಎನ್ನುತ್ತಾರೆ ಚೆನ್ನೈನ ಫೋರ್ಟಿಸ್ ಮಲಾರ್ ಆಸ್ಪತ್ರೆಯ ತುರ್ತು ಆರೈಕ ಘಟಕದ ಮುಖ್ಯಸ್ಥರಾದ ಡಾ. ಸುರೇಶ್ ರಾವ್.
ಆದರೆ ವಿಧಿಯಿರಲಿಲ್ಲ, ಅದೇ ಹೃದಯವನ್ನು ಜೋಡಿಸಲು ಮುಂದಾದೆವು. ಯಾಕೆಂದರೆ ಇನ್ನೊಂದು ಹೃದಯ ಯಾವಾಗ ಸಿಗುತ್ತದೋ ಎಂಬುದು ನಮಗೆ ಗೊತ್ತಿರಲಿಲ್ಲ. ಕಳೆದ ನಾಲ್ಕು ತಿಂಗಳಲ್ಲಿ ಆ ಬಾಲಕನಿಗೆ ಹೃದಯ ಕಸಿ ಅಷ್ಟೇ ಅಲ್ಲ, ಮೂರು ಸಲ ಹೃದಯಾಘಾತವೂ ಆಗಿದ್ದು ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ತಾಯಿಯೊಂದಿಗೆ ರಷ್ಯಾ ಬಾಲಕ
ತನ್ನ ಮಗನಿಗೆ ಚೆನ್ನೈನಲ್ಲೇ ಶಸ್ತ್ರಚಿಕಿತ್ಸೆ ಮಾಡಿಸಲು ಯಾಕೆ ನಿರ್ಧರಿಸಿದೆನೋ ಗೊತ್ತಿಲ್ಲ. ಆದರೆ ಈಗ ಸಂತಸವಾಗುತ್ತಿದೆ ಎನ್ನುತ್ತಾರೆ ಬಾಲಕನ ತಾಯಿ ಎಕಟೆರಿನಾ. ನಿರುದ್ಯೋಗಿಯಾಗಿದ್ದು ಒಂಟಿಯಾಗಿರುವ ಆ ತಾಯಿಗೆ ರಷ್ಯಾ ಸರಕಾರ ಚಿಕಿತ್ಸೆಗೆ ನೆರವು ನೀಡಿತ್ತು. ಹಾಗಾಗಿ ಅವರು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದರು.
ಬಾಲಕನಿಗೆ ಹೃದಯ ಜೋಡಣೆ ಮಾಡಿರುವ ಶಸ್ತ್ರಚಿಕಿತ್ಸಕರಾದ ಡಾ. ಕೆ ಆರ್ ಬಾಲಕೃಷ್ಣನ್ ಅವರೇ ಇದೊಂದು ಬೆರಗುಗೊಳಿಸುವ ಕಥೆ ಎನ್ನುತ್ತಾರೆ. ಆ ಬಾಲಕ ಕಾರ್ಡಿಯೋಮೈಯೋಪತಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದ. ರಕ್ತ ಪಂಪ್ ಮಾಡಲು ಹೃದಯ ತುಂಬಾ ಹೆಣಗುವಂತಹ ಸಮಸ್ಯೆ ಅದು. ನವೆಂಬರ್ 10 ರಂದು ಅವರು ಆಸ್ಪತ್ರೆಗೆ ಬಂದಾಗ ಹೃದಯ ವಿಫಲವಾಗುತ್ತಿತ್ತು. ಹೊಸ ಹೃದಯ ಜೋಡಣೆ ಮಾಡಲೇಬೇಕಿತ್ತು ಎನ್ನುತ್ತಾರೆ ಡಾ. ಬಾಲಕೃಷ್ಣನ್.
ಯಾಬೊಬ್ಬ ಭಾರತೀಯನೂ ತೆಗೆದುಕೊಳ್ಳದ ಹೃದಯಗಳನ್ನು ವಿದೇಶೀಯರಿಗೆ ಜೋಡಣೆ ಮಾಡಲಾಗುತ್ತದೆ. O+ ಬ್ಲಡ್ ಗ್ರೂಪ್‌ನ ಆ ಹೃದಯವನ್ನು ಯಾರೂ ಸ್ವೀಕರಿಸಿರಲಿಲ್ಲ. ಹೃದಯಕ್ಕಾಗಿ ಕಾಯುತ್ತಿರಬೇಕಾದರೆ ಜನವರಿ 4 ರಂದು ಆ ಬಾಲಕನಿಗೆ ಹೃದಯಾಘಾತವಾಯಿತು. ಬಳಿಕ ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬ್ರೇನ್ ಆಕ್ಸಿಜನೇಷನ್ (ಇಸಿಎಂಓ) ಎಂಬ ಹಾರ್ಟ್ ಪಂಪ್‌ ಮೆಷಿನ್‌ಗೆ ಜೋಡಿಸಿದರು.

ಎಂಟು ವರ್ಷದ ಬಾಲಕ ರೋಮನ್
ಜನವರಿ 17ರಂದು ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಕರೆಬಂತು. ವೈದ್ಯರು ತಿರಸ್ಕರಿಸಿರುವ ಹೃದಯವನ್ನು ಸ್ವೀಕರಿಸುವಂತೆ ಹೇಳಿದರು. ಇನ್ನೊಂದು ಕಡೆ ಬಾಲಕನಿಗೆ ಹೃದಯಸ್ತಂಭನವಾಗಿತ್ತು. ಆ ಹೃದಯವನ್ನು ಜೋಡಿಸಿದೆವು. ಈ ರೀತಿಯ ಹೃದಯವನ್ನು ಜೋಡಿಸಿ ಯಶಸ್ವಿಯಾಗಿದ್ದು ತುಂಬಾ ಅಪರೂಪ ಆದರೆ ಅಸಮಾನ್ಯವೇನಲ್ಲ ಎನ್ನುತ್ತಾರೆ ಬಾಲಕೃಷ್ಣನ್.

Comments are closed.