ಮನೋರಂಜನೆ

ಖುಷಿ ಚಿತ್ರದ ನಟಿ ಚೈತ್ರಾ ಸಂಸಾರದಲ್ಲಿ ಬಿರುಕು!

Pinterest LinkedIn Tumblr


ಬೆಂಗಳೂರು: ಉದ್ಯಮಿಯೊಬ್ಬನನ್ನು ಪ್ರೀತಿಸಿ ಮದುವೆಯಾಗಿದ್ದ ಪತಿ ಮಾನಸಿಕವಾಗಿ, ದೈಹಿಕವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ನಟಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ಯಾಂಡಲ್‌ವುಡ್ ನಟಿ ಚೈತ್ರಾ ತನ್ನ ಪತಿ ಬಾಲಾಜಿ ಪೋತರಾಜ್‌ನ ಮೇಲೆ ದೂರು ದಾಖಲಿಸಿದ್ದಾಳೆ. ಕಳೆದ 11 ವರ್ಷಗಳ ಹಿಂದೆ ಉದ್ಯಮಿಯೊಬ್ಬನನ್ನು ಪ್ರೀತಿಸಿ ಮದುವೆಯಾಗಿದ್ದ ಚೈತ್ರಾ ಪೋತಾರಾಜ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಖುಷಿ ಮತ್ತು ಶಿಷ್ಯ ಎಂಬ ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಚೈತ್ರಾ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿದ್ದರು. ಚೈತ್ರಾ ಸಿನಿಮಾ ನಟಿಯಾಗಿದ್ದರಿಂದ ಬಾಲಾಜಿಗೆ ಪತ್ನಿಯ ಮೇಲೆ ಸಾಕಷ್ಟು ಅನುಮಾನಪಡುತ್ತಿದ್ದ. ಚೈತ್ರಾ ಎಲ್ಲಿಗೆ ಹೋದರು ತನ್ನ ಗನ್‌ಮ್ಯಾನ್‌ನನ್ನು ಪತ್ನಿಯ ಜತೆಯಲ್ಲಿ ಕಳುಹಿಸುತ್ತಿದ್ದ ತನ್ನ ನಡತೆ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಬಗ್ಗೆ ಖಾತರಿ ಮಾಡಿಕೊಂಡ ಚೈತ್ರಾ ಮಂಗಳವಾರ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ನಾನು ಸಿನಿಮಾಗಳಲ್ಲಿ ನಟಿಸಬಾರದು ಎಂದು ಹೇಳಿದ್ದ ಕಾರಣ ತವರು ಮನೆಯವರ ಸಹಾಯದಿಂದ ಧಾರವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಆದರೆ ಧಾರವಾಹಿಯಿಂದ ಬಂದ ಹಣವನ್ನು ಕೂಡ ಬಾಲಾಜಿ ತೆಗೆದುಕೊಳ್ಳುತ್ತಿದ್ದರು. ಒಮ್ಮೆ ನಾನು ಬಾಲಾಜಿ ಜೊತೆ ಕಾರಿನಲ್ಲಿ ಹೋಗುತ್ತಿದ್ದಾಗ ನಮ್ಮಿಬ್ಬರ ನಡುವೆ ಗಲಾಟೆ ಆಗಿದ್ದು, ಆಗ ಬಾಲಾಜಿ ನನ್ನ ತಲೆಯನ್ನು ಕಾರಿನ ಕಿಟಕಿಗೆ ಡಿಕ್ಕಿ ಹೊಡೆಸಿ ಹಲ್ಲೆ ನಡೆಸಿದ್ದರು. ಆಗ ನನ್ನ ತಲೆ ಬುರುಡೆ ತೆರೆದುಕೊಂಡಿದ್ದು, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೆ ಎಂದು ಹೇಳಿದ್ದಾರೆ. ಪತಿ ಬಾಲಾಜಿ ಪೋತ ರಾಜ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು,ಆತನನ್ನು ಕರೆಸಿ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ.

Comments are closed.