ಅಂತರಾಷ್ಟ್ರೀಯ

ಪಾಕ್‌ ಟಿವಿ ಆ್ಯಂಕರ್‌ಗೆ ಸುಪ್ರೀಂ ಕೋರ್ಟ್‌ನಿಂದ 3 ತಿಂಗಳ ನಿಷೇಧ

Pinterest LinkedIn Tumblr


ಇಸ್ಲಾಮಾಬಾದ್‌ : ಪಂಜಾಬ್‌ ಪ್ರಾಂತ್ಯದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆಗೈದ ಎನ್ನಲಾದ ಇಮ್ರಾನ್‌ ಅಲಿ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ವಿಫ‌ಲನಾದ ಟಿವಿ ಆ್ಯಂಕರ್‌ ಗೆ ಮೂರು ತಿಂಗಳ ಕಾಲ ತನ್ನ ಟಿವಿ ಶೋ ನಡೆಸದಂತೆ ಪಾಕಿಸ್ಥಾನದ ಸುಪ್ರೀಂ ಕೋರ್ಟ್‌ ನಿಷೇಧ ಹೇರಿದೆ.

ಟಿವಿ ಒನ್‌ ನ್ಯೂಸ್‌ ಚ್ಯಾನಲ್‌ನ ಆ್ಯಂಕರ್‌ ಶಾಹೀದ್‌ ಮಸೂದ್‌ಗೆ ನಿಶ್ಶರ್ತ ಲಿಖೀತ ಕ್ಷಮೆಯಾಚನೆಯನ್ನು ಸಲ್ಲಿಸುವಂತೆ ಪಾಕಿಸ್ಥಾನದ ವರಿಷ್ಠ ನ್ಯಾಯಮೂರ್ತಿ ಸಾಕೀಬ್‌ ನಿಸಾರ್‌ ಅವರು ಆದೇಶಿಸಿದರು.

ಜನವರಿಯಲ್ಲಿ ಪ್ರಸಾರವಾದ ತನ್ನ ಟಿವಿ ಕಾರ್ಯಕ್ರಮದಲ್ಲಿ ಆ್ಯಂಕರ್‌ ಮಸೂದ್‌, ಪ್ರಮುಖ ರಾಜಕಾರಣಿಗಳನ್ನು ಒಳಗೊಂಡು ಪೋರ್ನೋಗ್ರಫಿ ಗ್ಯಾಂಗ್‌ ನ ಓರ್ವ ಸದಸ್ಯನಾಗಿರುವ ಇಮ್ರಾನ್‌ ಅಲಿಗೆ 37 ವಿದೇಶೀ ಖಾತೆಗಳಿದ್ದು ಅವುಗಳಿಗೆ ಹಣ ವರ್ಗಾವಣೆ ಆಗುತ್ತಿರುತ್ತದೆ ಎಂದು ಆರೋಪಿಸಿದ್ದ.

-ಉದಯವಾಣಿ

Comments are closed.