ರಾಷ್ಟ್ರೀಯ

ನಲ್ಲನಿಗಾಗಿ ಪ್ರಾಣ ತೆತ್ತ ‘ಗೇ’ ಸಂಶೋಧಕ!

Pinterest LinkedIn Tumblr


ಭೋಪಾಲ್: ಆತನ ಹೆಸರು ನೀಲೋತ್ಪಲ್ ಸರ್ಕಾರ್ (27). ಭೋಪಾಲ್‍ನಲ್ಲಿ ನ್ಯಾನೋ ಟೆಕ್ನಾಲಜಿಯಲ್ಲಿ ಸಂಶೋಧನೆ ಮಾಡುತ್ತಿದ್ದಾನೆ. ಇವರ ತಾಯಿ ವೈದ್ಯೆ, ತಂದೆ ಸರಕಾರಿ ಉನ್ನತಾಧಿಕಾರಿ. ಅವರು ಹರಿದ್ವಾರದಲ್ಲಿರುತ್ತಾರೆ. ಎಲ್ಲರೂ ಸುಶಿಕ್ಷಿತರೇ ಆದಂತಹ ಕುಟುಂಬದಲ್ಲಿ ಜನಿಸಿದ ನೀಲೋತ್ಪಲ್‌ಗೆ ಕಾಳಿಮಾತೆ ಎಂದರೆ ಭಕ್ತಿ ಜಾಸ್ತಿ. ಓದಿನಲ್ಲಿ ಸದಾ ಮುಂದಿರುತ್ತಿದ್ದ. ಆದರೆ ಯಾವಾಗಲೂ ಕಪ್ಪು ಬಟ್ಟೆ ಧರಿಸುತ್ತಾ ಒಂಟಿಯಾಗಿರುತ್ತಿದ್ದ. ಇತ್ತೀಚೆಗೆ ಕೆರೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಲಿಂಗಕಾಮಿ ಸಂಗಾತಿಗಾಗಿ ಸತ್ತುಹೋಗುತ್ತಿರುವುದಾಗಿ ಫೇಸ್‌ಬುಕ್ ಮೂಲಕ ತಿಳಿಸಿದ್ದಾನೆ.

ನೀಲೋತ್ಪಲ್‌ಗೆ ಪುನರ್ಜನ್ಮ, ಕನಸುಗಳ ಬಗ್ಗೆ ನಂಬಿಕೆ ಇತ್ತು. ಸಾಯಬೇಕೆಂದು ಮೊದಲೇ ಪ್ಲಾನ್ ಮಾಡಿಕೊಂಡ ನೀಲೋತ್ಪಲ್, ಕೈಗೆ ಒಂದು ಟ್ಯಾಗ್ ಧರಿಸಿ ಅದರ ಮೇಲೆ ತನ್ನ ಹೆಸರು, ಸ್ಥಳೀಯ ವಿಳಾಸ, ಫೋನ್ ನಂಬರ್ ಇನ್ನಿತರೆ ವಿವರಗಳನ್ನು ಬರೆದು ಕೆರೆಗೆ ಜಿಗಿದಿದ್ದ. ಆತ ಯಾಕೆ ಆತ್ಮಹತ್ಯೆಗೆ ಶರಣಾದ ಎಂಬ ಬಗ್ಗೆ ತನಿಖೆ ನಡೆಸಿದಾಗ ಚಕಿತಗೊಳಿಸುವ ವಾಸ್ತವಗಳು ಹೊರಬಿದ್ದಿವೆ.

ರೂಂನಿಂದ ಹೊರಬೀಳುವ ಮುನ್ನ ರಾತ್ರಿ ಹತ್ತು ಗಂಟೆ ಸಮಯದಲ್ಲಿ ‘ಫೈನಲ್ ನೋಟ್’ ಹೆಸರಿನಲ್ಲಿ ನೀಲೋತ್ಪಲ್ ಐದು ನಿಮಿಷಗಳ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ. ಆ ವೀಡಿಯೋ ನೋಡಿದ ಆತನ ಗೆಳೆಯರು, ಕುಟುಂಬಿಕರು ಬೆಚ್ಚಿಬಿದ್ದಿದ್ದಾರೆ. ಕರೆ ಮಾಡಿದರೂ ರಿಸೀವ್ ಮಾಡಿರಲಿಲ್ಲ. ವಿಧಿಯಿಲ್ಲದೆ, ‘ತಂದೆ ಹಾಸಿಗೆಯಿಂದ ಏಳದ ಸ್ಥಿತಿಯಲ್ಲಿದ್ದಾರೆ. ಕೂಡಲೆ ಬಂದು ಬಿಡು’ ಎಂಡು ತಾಯಿ ಆತನ ಫೇಸ್‍ಬುಕ್‍ನಲ್ಲಿ ಮೆಸೇಜ್ ಮಾಡಿದರು. ಆದರೂ ಆತ ಪ್ರತಿಕ್ರಿಯಿಸಿರಲಿಲ್ಲ.

‘ಎರಡು ವರ್ಷಗಳ ಹಿಂದೆ ದೀಪಾವಳಿ ದಿನ ಕಾಳಿ ಮಾತೆ ನನ್ನ ಕನಸಿನಲ್ಲಿ ಕಾಣಿಸಿಕೊಂಡಳು. ಈ ಕನಸನ್ನು ಬೇರೆಯವರಿಗೆ ತಿಳಿಸಿದರೆ ಅಂದೇ ನಿನ್ನ ಕೊನೆ ದಿನವಾಗುತ್ತದೆ. ಹಾಗಾಗಿ ಇಷ್ಟು ದಿನ ಆ ರಹಸ್ಯವನ್ನು ತನ್ನಲ್ಲೇ ಬಚ್ಚಿಟ್ಟುಕೊಂಡಿದ್ದೆ. ವರ್ಷದೊಳಗೆ ಯುವಕನೊಬ್ಬನ ಜತೆಗೆ ನಿನಗೆ ಪರಿಯವಾಗುತ್ತದೆ, ಅವನೇ ನಿನ್ನ ಬಾಳಸಂಗಾತಿ ಎಂದು ಕಾಳಿಮಾತೆ ಹೇಳಿದ್ದಳು. ಆದರೆ ತನಗೆ ಪ್ರಪೋಸ್ ಮಾಡಿದ ದಿನ ನಾನೂ ಹಾಗೂ ಸಂಗಾತಿ ಇಬ್ಬರೂ ಮೃತಪಡುತ್ತಾರೆಂದು ಕಾಳಿ ಮಾತೆ ಹೇಳಿದ್ದಳು. ಆ ರೀತಿ ಮಾಡಬೇಡ ಎಂದೂ ಬೇಡಿಕೊಂಡಿದ್ದೆ. ಆತನ್ಯಾರೋ ನನಗೆ ಗೊತ್ತಿಲ್ಲ, ನನಗಾಗಿ ಸಾಯಿಸಬೇಡ ಎಂದು ಪ್ರಾರ್ಥಿಸಿದ್ದೆ.

ತನ್ನನ್ನು ಆತ ಮದುವೆಯಾಗಬೇಕು, ಇದಕ್ಕೆ ಪರಿಹಾರ ಏನು ಎಂದು ಕೇಳಿದ್ದೆ.. ನೀವಿಬ್ಬಊ ಈ ಜನ್ಮದಲ್ಲೇ ಬೆರೆಯುತ್ತೀರಿ. ಆದರೆ ಮುಂದಿನ ಜನ್ಮದಲ್ಲಿ ನಿಮ್ಮಿಬ್ಬರಿಗೂ ಮದುವೆಯಾಗುತ್ತೀರ ಎಂದು ಕಾಳಿ ಮಾತೆ ಹೇಳಿದಳು. ಕಾಳಿಮಾತೆ ಹೇಳಿದಂತೆ ಆತ ನನ್ನ ಜೀವನದಲ್ಲಿ ಅಡಿಯಿಟ್ಟ. ನಾವಿಬ್ಬರೂ ದೈಹಿಕವಾಗಿ ಕೂಡಿಲ್ಲ. ಆದರೆ ಅನ್ಯೋನ್ಯವಾಗಿದ್ದೇವೆ’ ಎಂದು ನೀಲೋತ್ಪಲ್ ವೀಡಿಯೋದಲ್ಲಿ ತಿಳಿಸಿದ್ದಾನೆ.

ನೀಲೋತ್ಪಲ್ ಕುಟುಂಬಿಕರಿಗೆ ತಾನೊಬ್ಬ ಸಲಿಂಗಕಾಮಿ ಎಂಬ ಸಂಗತಿ ಗೊತ್ತಿರಲಿಲ್ಲ. ಸಾಯುವುದಕ್ಕೂ ಮುನ್ನ ಆತ ಗುವಾಹಟಿಯಲ್ಲಿನ ಕಾಮಾಕ್ಯದೇವಿಯ ಆಲಯಕ್ಕೆ ಭೇಟಿ ನೀಡಿದ್ದ. ತನ್ನ ಸಂಗಾತಿ ಜತೆಗೆ ಮದುವೆಯಾಗಬೇಕೆಂದು ಕೋರಿಕೊಂಡಿದ್ದ. ದರ್ಶನ ಮುಗಿಸಿಕೊಂಡ ಬಳಿಕ ಅಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಆದರೆ ಅದೇಗೋ ಪ್ರಾಣಾಪಾದಿಂದ ಕಾಪಾಡಿದ್ದರು. ನೀಲೋತ್ಪಲ್‌ನನ್ನು ಸೈಕಿಯಾಟ್ರಿಸ್ಟ್ ಬಳಿ ತೋರಿಸಿದ್ದರು. ಆದರೆ ಔಷಧಿಗಳನ್ನು ಸೇವಿಸುತ್ತಿರಲಿಲ್ಲ. ಕೊನೆಗೆ ಪ್ರಾಣ ಕಳೆದುಕೊಂಡಿದ್ದಾನೆ. ತನ್ನ ಸಂಗಾತಿಯೇ ತನ್ನ ಚಿತೆಗೆ ಬೆಂಕಿ ಇಡಬೇಕೆಂಬುದು ತನ್ನ ಕೊನೆಯ ಬಯಕೆ ಎಂದು ಪತ್ರದಲ್ಲಿ ತಿಳಿಸಿದ್ದಾನೆ.

Comments are closed.