ಅಂತರಾಷ್ಟ್ರೀಯ

ರಷ್ಯಾ ಪ್ಯಾಸೆಂಜರ್ ವಿಮಾನ ಪತನ, 71 ಜನರ ಸಾವು

Pinterest LinkedIn Tumblr


ಮಾಸ್ಕೋ: ಸುಮಾರು 71 ಜನರನ್ನು ಹೊತ್ತೊಯ್ಯುತ್ತಿದ್ದ ಸರಾಟೋವಾ ಏರ್‌ಲೈನ್‌ಗೆ ಸೇರಿದ ಪ್ರಯಾಣಿಕರ ವಿಮಾನ ಮಾಸ್ಕೊದ ಹೊರವಲಯದಲ್ಲಿ ಪತನವಾಗಿದ್ದು, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.

ಮಾಸ್ಕೋದ ಡೊಮೆಡೋವ್ ವಿಮಾನ ನಿಲ್ದಾಣದಿಂದ ಹೊರಟ ಅನ್‌ಟೊನೋವ್ ಆನ್‌–148 ಹೆಸರಿನ ವಿಮಾನ ಉರಲ್ಸ್‌ನ ಒರಸ್ಕ್‌ ನಗರಕ್ಕೆ ಪ್ರಯಾಣ ಬೆಳೆಸಿತ್ತು. 65 ಮಂದಿ ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದರು ಎನ್ನಲಾಗಿದೆ.

ಒರಾಸ್ಕ್‌ ನಗರದ ಬಳಿ ಹಾರುತ್ತಿದ್ದ ವಿಮಾನ ರಡಾರ್‌ ಸಂಪರ್ಕವನ್ನು ಕಳೆದುಕೊಂಡು ಪತನವಾಗಿದೆ. ಹವಾಮಾನ ವೈಪರೀತ್ಯವೇ ಈ ಘಟನೆಗೆ ಕಾರಣ ಎಂದು ತಜ್ಞರು ತಿಳಿಸಿದ್ದು, ತನಿಖೆ ಕೈಗೊಳ್ಳಲಾಗಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ದುರಂತದಲ್ಲಿ ಮಡಿದ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

Comments are closed.