ಮನೋರಂಜನೆ

ಸೆಲ್ಫಿ ಕೇಳಿದ್ದಕ್ಕೆ ಬಾಲಕನ ಮೊಬೈಲ್​ ಒಡೆದ ತೆಲುಗು ನಟಿ ಅನಸೂಯ ವಿರುದ್ಧ ದೂರು

Pinterest LinkedIn Tumblr


ಹೈದರಾಬಾದ್‌‌: ತೆಲುಗಿನ ಖ್ಯಾತ ಆ್ಯಂಕರ್‌ ಹಾಗೂ ನಟಿ ಅನಸೂಯ ಹೊಸ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅಭಿಮಾನಿ ಬಾಲಕನ ಮೊಬೈಲ್​ ಒಡೆದು ಹಾಕಿದ್ದಾರೆಂದು ನಟಿಯ ವಿರುದ್ಧ ದೂರು ದಾಖಲಾಗಿದೆ.

ಮೂಲಗಳ ಪ್ರಕಾರ ಸೋಮವಾರ ಮಹಿಳೆಯೊಬ್ಬರು ತಮ್ಮ ಮಗನೊಂದಿಗೆ ಹೈದರಾಬಾದಿನ ತರ್ನಾಕ್​ ಪೊಲೀಸ್​ ಠಾಣೆಗೆ ತೆರಳಿ ಅನಸೂಯ ಅವರು ಮಗನ ಮೊಬೈಲ್​ ಒಡೆದು ಹಾಕಿರುವ ಬಗ್ಗೆ ದೂರು ದಾಖಲಿಸಿದ್ದಾರೆ.

ನಗರದ ತರ್ನಾಕ್‌ನಲ್ಲಿರುವ ತಮ್ಮ ತಾಯಿ ಮನೆಗೆ ಅನಸೂಯ ತೆರಳಿದಾಗ. ಅಭಿಮಾನಿ ಬಾಲಕನೊಬ್ಬ ಅನಸೂಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಕೇಳಿದ್ದಾನೆ. ಈ ವೇಳೆ ಕೋಪಗೊಂಡ ನಟಿ ಆ ಬಾಲಕನ ಫೋನ್‌ ಕಸಿದು ಒಡೆದು ಹಾಕಿದ್ದಾರೆ ಎನ್ನಲಾಗಿದೆ.

ಅನಸೂಯ ವರ್ತನೆಗೆ ಬಾಲಕನ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದು, ಉಸ್ಮಾನಿಯಾ ವಿಶ್ವವಿದ್ಯಾಲಯದ ಪೊಲೀಸ್‌ ಠಾಣೆಯಲ್ಲಿ ನಟಿ ವಿರುದ್ಧ ಕೇಸ್‌ ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ಖಚಿತ ಪಡಿಸಿದ್ದು, ಪ್ರಕರಣದ ಸಾಕ್ಷಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಎಚ್ಚೆತ್ತ ನಟಿ ಅನಸೂಯ, ನಮ್ಮ ದೇಶಕ್ಕೆ ಇಂತಹ ಸುದ್ದಿಗಳ ಅವಶ್ಯಕತೆ ಇಲ್ಲ. ಒಂದು ವೇಳೆ ಮೊಬೈಲ್​ ಒಡೆದಿದ್ದರೆ ಕ್ಷಮೆ ಇರಲಿ. ಇಂತಹ ವಿಚಾರದಲ್ಲಿ ನನ್ನನ್ನು ದೂರುವುದು ಸರಿಯಲ್ಲ ಎಂದಿದ್ದಾರೆ.

Comments are closed.