ರಾಷ್ಟ್ರೀಯ

ಅಯೋಧ್ಯೆಯಲ್ಲಿ ಮಂದಿರ ಬೇಕೇ, ಮಸೀದಿ ಬೇಕೇ: ಕಾಂಗ್ರೆಸ್ ಪ್ರಶ್ನಿಸಿದ ಮೋದಿ

Pinterest LinkedIn Tumblr


ಅಹ್ಮದಾಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ಬೇಕೇ ಬಾಬರಿ ಮಸೀದಿ ಬೇಕೇ ಎಂದು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಪಕ್ಷವೇಕೆ ಅಯೋಧ್ಯೆ ವಿವಾದಕ್ಕೂ, 2019ರ ಲೋಕಸಭೆ ಚುನಾವಣೆಗೂ ಸಂಬಂಧ ಕಲ್ಪಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ಭಾಭರ್‌ನಲ್ಲಿ ನಡೆದ ಚುನಾವಣೆ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

2019ರ ಲೋಕಸಭೆ ಚುನಾವಣೆ ಮುಗಿಯುವವರೆಗೂ ಅಯೋಧ್ಯೆ ವಿವಾದದ ವಿಚಾರಣೆಯನ್ನು ಮುಂದೂಡಬೇಕು ಎಂದು ಕೋರಿ ಕಪಿಲ್ ಸಿಬಲ್ ಸಲ್ಲಿಸಿರುವ ಅರ್ಜಿ ಹಿನ್ನೆಲೆಯಲ್ಲಿ ಪ್ರಧಾನಿಯವರು ಕಾಂಗ್ರೆಸ್ ಮೇಲೆ ಹರಿಹಾಯ್ದರು.

ಅಯೋಧ್ಯೆ ವಿವಾದಕ್ಕೂ ಮತ್ತು 2019ರ ಲೋಕಸಭೆ ಚುನಾವಣೆಗೇಕೆ ಸಂಬಂಧ ಕಲ್ಪಿಸಲಾಗುತ್ತದೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ಉತ್ತರಿಸಿಲ್ಲ. ಪ್ರಕರಣದ ವಿಲೇವಾರಿಗೇಕೆ ತಡೆ ಒಡ್ಡುತ್ತಿದ್ದೀರಿ ಎಂಬ ಪ್ರಶ್ನೆಗೂ ಉತ್ತರಿಸುತ್ತಿಲ್ಲ. ಆದರೂ ಸಹ ಸಿಬಲ್ ಅವರು ತಾನು ಸುನ್ನಿ ವಕ್ಫ ಮಂಡಳಿಯ ವಕೀಲ ಅಲ್ಲವೆಂದು ಹೇಳುತ್ತಿದ್ದಾರೆ. ಸಿಬಲ್ ರಾಮಮಂದಿರದ ವಕೀಲರೋ ಅಥವಾ ಬಾಬ್ರಿ ಮಸೀದಿಯ ವಕೀಲರೋ ಎಂದು ಮೊದಲು ಸ್ಪಷ್ಟಪಡಿಸಲಿ. ನಿಮಗೆ ಸತ್ಯ ಹೇಳಲು ಸಾಧ್ಯವಾಗದಿದ್ದರೆ, ನಿಮ್ಮ ನಾಯಕ ರಾಹುಲ್ ಗಾಂಧಿಯಾದರೂ ಉತ್ತರಿಸಲಿ ಎಂದು ಮೋದಿ ಆಗ್ರಹಿಸಿದ್ದಾರೆ.

Comments are closed.