ರಾಷ್ಟ್ರೀಯ

ಕಾಂಗ್ರೆಸ್ ದೇಶಕ್ಕೆ ದೊಡ್ಡ ಹೊರೆಯಾಗಿದೆ, ಅಲ್ಲಿ ನೇತಾರನೂ ಇಲ್ಲ ನೀತಿಯೂ ಇಲ್ಲ : ಗುಜರಾತಿನಲ್ಲಿ ಮೋದಿ

Pinterest LinkedIn Tumblr

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ ಪ್ರಚಾರದ ಅಂಗವಾಗಿ ಪ್ರಾಚಿಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಮೇಲೆ ಕಿಡಿಕಾರಿದ ಮೋದಿ ಕಾಂಗ್ರೆಸ್ ದೇಶಕ್ಕೆ ದೊಡ್ಡ ಹೊರೆಯಾಗಿದೆ, ಅಲ್ಲಿ ನೇತಾರನೂ ಇಲ್ಲ ನೀತಿಯೂ ಇಲ್ಲ ಎಂದಿದ್ದಾರೆ.

ಭಾಷಣದ ಮುಖ್ಯಾಂಶಗಳು
* ನಾನು ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತಿನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ. ಅಲ್ಲಿನ ಜನರ ಉತ್ಸಾಹವನ್ನು ಕಂಡಿದ್ದೇನೆ. ನಮ್ಮನ್ನು ಆಶೀರ್ವದಿಸಲು ಹಲವಾರು ಮಹಿಳೆಯರು ಅಲ್ಲಿಗೆ ಬಂದಿದ್ದರು.

* ಸರ್ದಾರ್ ಪಟೇಲ್ ಇಲ್ಲದೇ ಇರುತ್ತಿದ್ದರೆ ಸೋಮನಾಥ ದೇವಾಲಯ ನಿರ್ಮಾಣವಾಗುತ್ತಿರಲಿಲ್ಲ. ಸೋಮನಾಥ ದೇವಾಲಯವನ್ನು ನೆನೆಯುವವರಲ್ಲಿ ನಾನು ಒಂದು ಪ್ರಶ್ನೆ ಕೇಳುತ್ತೇನೆ. ನೀವು ನಿಮ್ಮ ಇತಿಹಾಸವನ್ನು ಮರೆತಿದ್ದೀರಾ? ನಿಮ್ಮ ಕುಟುಂಬದ ಸದಸ್ಯರು, ನಮ್ಮ ಮೊದಲ ಪ್ರಧಾನಿ ಇಲ್ಲಿ ದೇವಾಲಯ ನಿರ್ಮಿಸುವುದರ ಬಗ್ಗೆ ಆಸಕ್ತಿ ತೋರಲಿಲ್ಲ. ಡಾ. ರಾಜೇಂದ್ರ ಪ್ರಸಾದ್ ಅವರು ಸೋಮನಾಥ ದೇವಾಲಯ ಉದ್ಘಾಟನೆಗೆ ಬಂದಾಗ ಪಂಡಿತ್ ನೆಹರೂ ಅವರು ಅಸಮಾಧಾನ ವ್ಯಕ್ತ ಪಡಿಸಿದ್ದರು. ಸರ್ದಾರ್ ಪಟೇಲ್ ಅವರು ನರ್ಮದಾ ಬಗ್ಗೆ ಕನಸು ಕಂಡಿದ್ದರು ಆದರೆ ನಿಮ್ಮ ಕುಟುಂಬ ಆ ಕನಸನ್ನು ನನಸು ಮಾಡಲು ಬಿಡಲಿಲ್ಲ.

* ಕಾಂಗ್ರೆಸ್ ಒಬಿಸಿ ಸಮುದಾಯದವರಲ್ಲಿ ಮತ ಕೇಳುತ್ತಿದ್ದೆ, ಆದರೆ ಇಷ್ಟು ವರ್ಷಗಳ ಕಾಲ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಲಭಿಸುವಂತೆ ಮಾಡದೇ ಇದ್ದುದು ಯಾಕೆ? ನಾವು ಅದಕ್ಕಾಗಿ ಶ್ರಮಿಸಿದೆವು. ಲೋಕಸಭೆಯಲ್ಲಿ ಅದಕ್ಕೆ ಅನುಮತಿ ಸಿಕ್ಕರೂ ಕಾಂಗ್ರೆಸ್ ಬಹುಮತವಿರುವ ರಾಜ್ಯಸಭೆಯಲ್ಲಿ ಅದಕ್ಕೆ ಅನುಮತಿ ಸಿಕ್ಕಿಲ್ಲ.

*ನಾವು ಏನೇ ಯೋಜನೆಗಳನ್ನು ಮಾಡಿದರೂ ಕಾಂಗ್ರೆಸ್ ಅದಕ್ಕೆ ಅಡ್ಡಿಪಡಿಸುತ್ತಲೇ ಇರುತ್ತದೆ, ಸಂಸತ್‍ನಲ್ಲಿ ನಾವು ಶೀಘ್ರದಲ್ಲೇ ಸಭೆ ಸೇರಲಿದ್ದು ಈ ವಿಷಯವನ್ನು ಮತ್ತೆ ಚರ್ಚೆಗೆ ತರಲಾಗುವುದು. ನಾನು ಒಬಿಸಿ ಸಮುದಾಯಕ್ಕೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಲು ಬಯಸುತ್ತೇವೆ.

* 70 ವರ್ಷಗಳ ಕಾಲ ದೇಶವನ್ನು ಲೂಟಿ ಮಾಡಿದವರಿಗೆ ನನ್ನ ಅಧಿಕಾರವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ.

*ಕಾಂಗ್ರೆಸ್‍ನವರಲ್ಲಿ ನಾನೊಂದು ಪ್ರಶ್ನೆ ಕೇಳುತ್ತೇನೆ. ನೀವು ಸೇನೆಯನ್ನು ವಿರೋಧಿಸುತ್ತಿರುವುದು ಯಾಕೆ? 40 ವರ್ಷಗಳ ಕಾಲ ಒಆರ್‍ಒಪಿ ತೀರ್ಮಾನ ಇತ್ಯರ್ಥಗೊಳಿಸದೇ ಇದ್ದುದು ಯಾಕೆ? ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಸುಮ್ಮನೇ ಇದ್ದುದು ಯಾಕೆ?

*ಚುನಾವಣೆ ಸಮೀಪಿಸುತ್ತಿದ್ದಂತೆ ಅವರು ಒಆರ್‍ಒಪಿಗೆ ₹500 ಕೋಟಿ ಘೋಷಿಸಿದರು. ಈ ಮೂಲಕ ಅವರು ದಾರಿ ತಪ್ಪಿಸುವ ಕೆಲಸವನ್ನೂ ಮಾಡಿದರು.

*ನಮ್ಮ ಸಾಗರ್ಮಲ, ಭಾರತ್‌ಮಲ ಯೋಜನೆಗಳು ಕರಾವಳಿಯಲ್ಲಿರುವ ಜನರಿಗೆ ಉಪಯೋಗಪ್ರದವಾಗಲಿದೆ.

Comments are closed.