ಅಂತರಾಷ್ಟ್ರೀಯ

ಬ್ಯಾಗ್‌ ದೋಚಲು ಹೋದ ಕಳ್ಳನನ್ನು ಕಚ್ಚಿ ಮಹಿಳೆಯನ್ನು ರಕ್ಷಿಸಿದ ಬೀದಿ ನಾಯಿ ! ವಿಡಿಯೊ ವೈರಲ್‌…

Pinterest LinkedIn Tumblr

https://youtu.be/p_jNsgX-jN0

ಮಾಂಟಿನೆಗ್ರೋ: ತನ್ನ ಪಾಡಿಗೆ ರಸ್ತೆಯಲ್ಲಿ ಕುಳಿತು ಹಾದಿ ಹೋಕರನ್ನು ಗಮನಿಸುತ್ತಿದ್ದ ಶ್ವಾನ, ಕ್ಷಣಾರ್ಧದಲ್ಲಿ ಕಳ್ಳನ ಮೇಲೆ ದಾಳಿ ನಡೆಸಿ ಓಡಿಸುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಒಂಟಿಯಾಗಿ ನಡೆದು ಸಾಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿ ಆಕೆಯ ಬ್ಯಾಗ್‌ ದೋಚಲು ಮುಂದಾಗುತ್ತಾನೆ. ಗಟ್ಟಿಯಾಗಿ ಬ್ಯಾಗ್‌ ಹಿಡಿದಿದ್ದ ಆಕೆ ಚೀರುತ್ತಿದ್ದಂತೆ ದಿಢೀರ್‌ ದಾಳಿ ಮಾಡುವ ಬೀದಿ ನಾಯಿ ಕಳ್ಳನನ್ನು ಕಚ್ಚಿ ಓಡಿಸಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಯುರೋಪ್‌ನ ಮಾಂಟಿನೆಗ್ರೋದ ರಸ್ತೆಯೊಂದರಲ್ಲಿ ನಡೆದಿರುವ ಘಟನೆಯ ವಿಡಿಯೊ ಅನ್ನು ಇಂಗ್ಲೆಂಡ್‌ನ ಕಾನ್‌ಸ್ಟೆಬಲ್‌ ಒಬ್ಬರು ಟ್ವಿಟರ್‌ನಲ್ಲಿ ಇತ್ತೀಚೆಗೆ ಪ್ರಕಟಿಸಿಕೊಂಡಿದ್ದರು.

Comments are closed.