ರಾಷ್ಟ್ರೀಯ

ನಾನು ಚಹಾ ಮಾರಿದ್ದೇನೆ ನಿಜ, ಆದರೆ ದೇಶವನ್ನು ಮಾರಿಲ್ಲ: ಕಾಂಗ್ರೆಸ್‌ಗೆ ಮೋದಿ ತಿರುಗುಬಾಣ

Pinterest LinkedIn Tumblr


ಹೊಸದಿಲ್ಲಿ: ಗುಜರಾತ್‌ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಚುನಾವಣಾ ಪ್ರಚಾರದ ಅಖಾಡಾಕ್ಕೆ ಧುಮುಕಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ವಾಗ್ಬಾಣಗಳನ್ನು ಬಿಟ್ಟಿದ್ದಾರೆ.

ಚಹಾ ಮಾರುವವ ಎಂದು ಟೀಕಿಸಿದ್ದ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ತಮ್ಮದೇ ಶೈಲಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ.

ರಾಜ್‌ಕೋಟ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ನಾನು ಚಹಾ ಮಾರಿದ್ದು ನಿಜ. ಚಹಾ ಮಾರುವವ ಕೂಡ ಹೌದು, ಆದರೆ ಎಂದಿಗೂ ದೇಶವನ್ನು ಮಾರಾಟ ಮಾಡಿಲ್ಲ. ಪ್ರತಿಪಕ್ಷಗಳಂತೆ ಇಂಥ ಕೀಳು ಮಟ್ಟಕ್ಕೆ ಇಳಿದಿಲ್ಲ ಎಂದರು.

ಕಾಂಗ್ರೆಸ್‌ಗೆ ನನ್ನನ್ನು ಕಂಡರೆ ಆಗಲ್ಲ. ನಾನು ಬಡತನದ ಮೂಲದಿಂದ ಬಂದವನು ಎಂಬುದು ಅವರ ಕೋಪಕ್ಕೆ ಕಾರಣ. ಬಡ ವ್ಯಕ್ತಿಯೊಬ್ಬ ಪ್ರಧಾನಿ ಹುದ್ದೆಗೇರಿದ್ದು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಒಂದು ರಾಷ್ಟ್ರೀಯ ಪಕ್ಷ ಇಷ್ಟೊಂದು ಕೀಳುಮಟ್ಟಕ್ಕೆ ಇಳಿಯುತ್ತದೆ ಎಂಬುದು ತಿಳಿಯುತ್ತಿಲ್ಲ ಮೋದಿ ತಿಳಿಸಿದರು.

ಕಾಂಗ್ರೆಸ್‌ ಪಕ್ಷ ನನ್ನನ್ನು ಮಾತ್ರವಲ್ಲ. ನಮ್ಮ ಹಿಂದಿನ ತಲೆಮಾರಿನ ನಾಯಕರನ್ನೂ ಟೀಕಿಸಿದ್ದಾರೆ. ಅವರಿಗೆ ಗೌರವ ಕೊಡುವುದು ಮತ್ತು ಪಡೆಯುವುದು ಗೊತ್ತಿಲ್ಲ ಎಂದು ಮೋದಿ ಹೇಳಿದ್ದಾರೆ.

ಮೋದಿಯನ್ನು ಅಂತಾರಾಷ್ಟ್ರೀಯ ನಾಯಕರ ಮುಂದೆ ಚಹಾ ಮಾರುವವ ಎಂದು ಬಿಂಬಿಸಿ ಕಾಂಗ್ರೆಸ್‌ ಯುವ ಘಟಕ ಮಾಡಿದ ಟ್ವೀಟ್‌ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಇದಕ್ಕೆ ಬಿಜೆಪಿ ನಾಯಕರು ಹಾಗೂ ಈಗ ಮೋದಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.