ಮಂಗಳೂರು, ನವೆಂಬರ್.27:ಫರಂಗಿಪೇಟೆಯಲ್ಲಿ ಕಳೆದ ತಿಂಗಳು ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಇಇನೋರ್ವ ಆರೋಪಿಯನ್ನು ಮಂಗಳೂರು ಡಿಸಿಐಬಿ ಪೊಲೀಸರು ಬಂದಿಸಿದ್ದು, ಈ ಮೂಲಕ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೇರಿದೆ.
ಅಡ್ಯಾರ್ ನಿವಾಸಿ ಇಮ್ರಾನ್ ಯಾನೆ ಪಲ್ಟಿ ಇಮ್ರಾನ್ ಬಂಧಿತ ಆರೋಪಿ. ಡಿಸಿಐಬಿ ಇನ್ ಸ್ಪೆಕ್ಟರ್ ಅಮಾನುಲ್ಲಾ ಅವರ ನೇತೃತ್ವ ತಂಡ ಇಂದು ಆರೋಪಿಯನ್ನು ಉಳ್ಳಾಲ ಸಮೀಪದ ತೊಕ್ಕೊಟ್ಟು ಬಳಿ ಬಂಧಿಸಿದೆ.
ಕಳೆದ ತಿಂಗಳು ಫರಂಗಿಪೇಟೆಯಲ್ಲಿ ಅಡ್ಯಾರ್ ಮತ್ತು ಕಣ್ಣೂರಿನ ತಂಡ ಎರಡು ವಾಹನದಲ್ಲಿ ಅಗಮಿಸಿ ನಡೆಸಿದ ಗ್ಯಾಂಗ್ ವಾರ್ ನಲ್ಲಿ ಝಿಯಾ ಮತ್ತು ಫಯಾಝ್ ಎಂಬವರು ಹತ್ಯೆಗೀಡಾಗಿದ್ದರು.
ಮಾತ್ರವಲ್ಲದೇ ಅನಿಸ್, ಪೈಝಲ್ ಮತ್ತು ಮುಸ್ತಾಕ್ ಎಂಬವರು ಗಂಭೀರ ಗಾಯಗೊಂಡಿದ್ದರು. ಘಟನೆಗೆ ಹಳೆಯ ದ್ವೇಷವೇ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು 11 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಇಮ್ರಾನ್ ಬಂಧನದೊಂದಿಗೆ ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಬಂಧಿತರ ಸಂಖ್ಯೆ 12ಕ್ಕೇರಿದೆ.
ಆರೋಪಿಯನ್ನು ಮುಂದಿನ ತನಿಖೆಗಾಗಿ ಬಂಟ್ವಾಳ ಎಎಸ್ಪಿ ಡಾ.ಅರುಣ್ ಅವರಿಗೆ ಹಸ್ತಾಂತರಿಸಲಾಗಿದೆ.