ರಾಷ್ಟ್ರೀಯ

ಹೈದರಾಬಾದ್​ ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವ ಫಾರಿನ್​ ರಿಟರ್ನ್​​ ವಿದ್ಯಾವಂತ ಮಹಿಳೆಯರು !

Pinterest LinkedIn Tumblr

ಹೈದರಾಬಾದ್​: ಒಂದು ಉತ್ತಮ ಪದವಿ ಪಡೆದು ಕೆಲಸ ಸಿಗದೆ ಹತಾಶರಾದ ಯುವಕರು ಇನ್ನೇನಪ್ಪಾ ಭಿಕ್ಷೆ ಬೇಡುವುದೊಂದೆ ಗತಿ ನಮಗೆ ಎಂದು ಮಾತನಾಡುವುದನ್ನ ಕೇಳಿರುತ್ತಿರಿ. ಆದರೆ ನಿಜವಾಗಿಯೂ ಈ ರೀತಿ ಯಾರಾದರೂ ಮಾಡಿದರೆ? ಇದನೇಪ್ಪ ಅಂತ ಯೋಚಿಸುತ್ತಿದ್ದಿರಾ… ಮುಂದೆ ಓದಿ…

ಮುತ್ತಿನ ನಗರಿ​ಯಲ್ಲಿ ಭಿಕ್ಷೆ ಬೇಡುವುದು ಅಪರಾಧ ಎಂದು ಕೆಲವು ದಿನಗಳ ಹಿಂದೆ ಘೋಷಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಪ್ರದೇಶದಲ್ಲಿರವು ಭೀಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸುತ್ತಿದ್ದಾರೆ. ಹಾಗೆ ಸೇರಿಸಿದ ಇಬ್ಬರು ಮಹಿಳೆಯರು ಎಂಬಿಎ ಪದವಿಧರರು ಮತ್ತು ಒಳ್ಳೆಯ ಕುಟುಂಬದಿಂದ ಬಂದವರು ಎಂದು ಆಶ್ಚರ್ಯಕರ ಮಾಹಿತಿ ತಿಳಿದು ಬಂದಿದೆ.

ಅಮೇರಿಕ ಅಧ್ಯಕ್ಷರ ಪುತ್ರಿ ಇವಾಂಕಾ ಟ್ರಂಪ್​ ಇಲ್ಲಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರೀ ತಯಾರಿ ನಡೆದಿದ್ದು, ದರ್ಗಾದ ಎದುರು ಭಿಕ್ಷೆ ಬೇಡುತ್ತಿದ್ದ ಹಲವಾರು ಭಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿದೆ.

ಈ ವೇಳೆ ಪುನರ್ವಸತಿ ಕೇಂದ್ರದ ಸಿಬ್ಬಂದಿಯೊಂದಿಗೆ ಇಬ್ಬರು ಮಹಿಳೆಯರು ಇಂಗ್ಲಿಷ್​ನಲ್ಲಿ ವಾದ ಮಾಡುತ್ತಿದ್ದರು. ಇದನ್ನು ಗಮನಿಸಿ ಅವರ ಹಿನ್ನೆಲೆಯನ್ನು ವಿಚಾರಿಸಿದಾಗ ಆ ಇಬ್ಬರು ಸುಶಿಕ್ಷಿತ ಹಾಗೂ ಉತ್ತಮ ಕುಟುಂಬದ ಮಹಿಳೆಯರು ಎಂದು ತಿಳಿದು ಬಂದಿದೆ.

MBA ಪದವೀಧರರು..
50 ವರ್ಷದ ಫರ್ಜೀನಾ ಎಂಬ ಮಹಿಳೆ ಎಂಬಿಎ ಪದವಿ ಪಡೆದಿದ್ದು, ಲಂಡನ್​ನಲ್ಲಿ ಕೆಲಸ ಮಾಡಿದವರಾಗಿದ್ದಾರೆ. ಹಾಗೂ ಉತ್ತಮ ಅಪಾರ್ಟಮೆಂಟ್​ವೊಂದರಲ್ಲಿ ಮನೆ ಹೊಂದಿದವರಾಗಿದ್ದಾರೆ. ಅವರ ಮಗ ಆರ್ಕಿಟೆಕ್ಟ್​ ಆಗಿ ಅಮೇರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮತ್ತೊಬ್ಬ ಮಹಿಳೆ ರಾಬೀಯಾ ಬಸೀರಾ ಇಲ್ಲಿನ ಡಿಫೆನ್ಸ್​ ಕಾಲನಿಯವರಾಗಿದ್ದು, ಗ್ರೀನ್​ ಕಾರ್ಡ್​ ಹೊಂದಿದವರಾಗಿದ್ದಾರೆ ಮತ್ತು ಶ್ರೀಮಂತ ಕುಟುಂಬದವರು ಎಂದು ತಿಳಿದು ಬಂದಿದೆ.

ಆದರೆ ಇಬ್ಬರು ಕೆಲವು ವೈಯ್ಯಕ್ತಿಕ ಸಮಸ್ಯೆಗಳಿಂದಾಗಿ ಈ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಪುನರ್ವಸತಿ ಪೊಲೀಸರು ತಿಳಿಸಿದ್ದಾರೆ.

Comments are closed.