ಕ್ರೀಡೆ

ಕ್ರಿಕೆಟ್ ಇತಿಹಾಸಕ್ಕೆ ಸೇರ್ಪಡೆಗೊಂಡ ಲಂಕಾ ಕ್ರಿಕೆಟಿಗನ ವಿಚಿತ್ರ ಆಟ ! ಈ ವೀಡಿಯೊ ನೋಡಿ…

Pinterest LinkedIn Tumblr

https://youtu.be/fhebAlfnonI

ಕೊಲಂಬೊ: ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ ಚಾಮರ ಸಿಲ್ವಾ ಬ್ಯಾಟಿಂಗ್ ಮಾಡುವ ವೇಳೆ ವಿಚಿತ್ರ ರೀತಿಯ ಹೊಡೆತ ಬಾರಿಸಲು ಪ್ರಯತ್ನಿಸಿ ಔಟಾಗಿದ್ದಾರೆ. ಲಂಕಾ ದೇಶೀಯ ಕ್ರಿಕೆಟ್ ಪಂದ್ಯದಲ್ಲಿ 37 ವರ್ಷದ ಚಾಮರ ಸಿಲ್ವಾ ಬೌಲರ್ ಎಸೆತವನ್ನು ವಿಕೆಟ್ ಹಿಂದಿನಿಂದ ಬಾರಿಸಲು ಯತ್ನಿಸಿ ಬೌಲ್ಡ್ ಆಗಿದ್ದಾರೆ. ಈ ಅತಿರೇಕದ ಬ್ಯಾಟಿಂಗ್ ಶೈಲಿಯ ವಿಡಿಯೊ ವೈರಲ್ ಆಗಿದ್ದು, ಇದನ್ನು ‘ಕ್ರಿಕೆಟ್ ಇತಿಹಾಸದ ಅತ್ಯಂತ ಕೆಟ್ಟ ಶಾಟ್ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಲಾಗಿದೆ.

ಇತ್ತೀಚೆಗೆ ಪಿ. ಸಾರಾ ಓವಲ್ ಮೈದಾನದಲ್ಲಿ ನಡೆದ ಎಂಎಎಸ್ ಹೋಲ್ಡಿಂಗ್ಸ್ ಯುನಿಚೆಲಾ ಮತ್ತು ಟೀಜೆ ಲಂಕಾ ತಂಡಗಳ ನಡುವಿನ ಟಿ20 ಪಂದ್ಯ ಈ ವಿಚಿತ್ರ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಟೀಜೆ ತಂಡದ ವೇಗಿ ಕಸುನ್ ಮದುಸಂಕಾ ಎಸೆತದಲ್ಲಿ ಚಾಮರ ಸಿಲ್ವಾ ಉದ್ದೇಶಪೂರ್ವಕವಾಗಿಯೇ ತಾವು ಬ್ಯಾಟಿಂಗ್ ಮಾಡುತ್ತಿದ್ದ ವಿಕೆಟ್ ಹಿಂಭಾಗಕ್ಕೆ ವೇಗವಾಗಿ ಓಡಿ ಅಲ್ಲಿಂದ ಲೆಗ್​ಸೈಡ್​ನತ್ತ ಬ್ಯಾಟ್ ಬೀಸಿದರು. ಆದರೆ ಆ ಎಸೆತ ನೇರವಾಗಿ ವಿಕೆಟ್​ಗೆ ಬಡಿದಿದೆ. ಇದನ್ನು ಕೆಲವರು ವಿಕೆಟ್ ಒಪ್ಪಿಸಲು ಮಾಡಿದ ‘ಆತ್ಮಹತ್ಯೆ’ ಎಂದೂ ಕಾಲೆಳೆದಿದ್ದಾರೆ. ಚಾಮರ ಕೇವಲ 6 ರನ್ ಬಾರಿಸಿದ್ದರು. ಹೋಲ್ಡಿಂಗ್ಸ್ 8 ವಿಕೆಟ್​ಗೆ 208 ರನ್ ಗಳಿಸಿದ್ದರೆ, ಪ್ರತಿಯಾಗಿ ಟೀಜೆ ತಂಡ 156 ರನ್​ಗೆ ಆಲೌಟ್ ಆಗಿತ್ತು. ಚಾಮರ ಸಿಲ್ವಾ ಈ ಹಿಂದೆ ಕ್ರೀಡಾಸ್ಪೂರ್ತಿಯನ್ನು ಮರೆತು ಅನುಚಿತ ವರ್ತನೆ ತೋರಿದ್ದಕ್ಕೆ 2 ವರ್ಷ ಕ್ರಿಕೆಟ್​ನಿಂದ ನಿಷೇಧಕ್ಕೊಳಗಾಗಿದ್ದರು. ಬಳಿಕ ದೇಶೀಯ ಕ್ರಿಕೆಟ್​ನಲ್ಲಿ ಆಡುವ ಅವಕಾಶ ಪಡೆದಿದ್ದರು.

Comments are closed.