ರಾಷ್ಟ್ರೀಯ

ಭಿಕ್ಷುಕನಿಗೆ ಕುಲಾಯಿಸಿದ ಅದೃಷ್ಟ ! ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ …

Pinterest LinkedIn Tumblr

ಹರಿದ್ವಾರ: ಜೀವನವಿಡೀ ಕಷ್ಟಪಟ್ಟು ಕೂಡಿಟ್ಟ ಪಿಂಚಣಿ ಹಣವನ್ನು ಮಕ್ಕಳಿಂದ ಉಳಿಸಿಕೊಳ್ಳಲು ಆ ವೃದ್ಧ 2 ಸಾವಿರ ರೂ. ಮುಖಬೆಲೆಯ 45 ಲಕ್ಷ ರೂ. ಮೊತ್ತವನ್ನು ಯಾರಿಗೂ ತಿಳಿಯದಂತೆ ಹಾಸಿಗೆಯಲ್ಲಿ ಬಚ್ಚಿಟ್ಟಿದ್ದ. ಅಪ್ಪ ಹಳೆಯ ಹಾಸಿಗೆಯಲ್ಲಿ ಮಲಗುವುದನ್ನು ನೋಡಿ ಮರುಗಿದ ಮಗ ಆ ಹಾಸಿಗೆಯನ್ನು ದೇವಾಲಯವೊಂದರ ಎದುರಿದ್ದ ಭಿಕ್ಷುಕನಿಗೆ ಕೊಟ್ಟ. ತುತ್ತು ಅನ್ನಕ್ಕೂ ಪರಿತಪಿಸುತ್ತಿದ್ದ ಆ ಭಿಕ್ಷುಕ ಆ ಹಾಸಿಗೆಯನ್ನು ಮತ್ತೋರ್ವ ಭಿಕ್ಷುಕನಿಗೆ ಮಾರಿಬಿಟ್ಟ. ಬಿಡಿಗಾಸಿನಲ್ಲಿ ಹಾಸಿಗೆ ಕೊಂಡ ಆ ಭಿಕ್ಷುಕ ಈಗ ಎತ್ತ ಹುಡುಕಿದರೂ ಕಣ್ಣಿಗೆ ಬೀಳುತ್ತಿಲ್ಲ!

ಅದೃಷ್ಟ ,ದುರದೃಷ್ಟ ಎಂಬುದು ಹೇಗೆ ಮನುಷ್ಯನನ್ನು ಆಟವಾಡಿಸುತ್ತದೆ ಎಂಬುದಕ್ಕೆ ಈ ಪ್ರಕರಣವೇ ನಿದರ್ಶನ. ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂಬ ಮಾತು ನೆನಪಿಸುವ ಈ ಪ್ರಸಂಗ ನಡೆದಿದ್ದು ಉತ್ತರಾಖಂಡದ ಹರಿದ್ವಾರದ ರಾಣಿಪುರದಲ್ಲಿ. ಮನೆಯಿಂದ ಹೊರಹೋಗಿದ್ದ ವೃದ್ಧ ಮನೆಗೆ ಮರಳಿದಾಗ ಹಾಸಿಗೆ ದಾನಮಾಡಿದ್ದನ್ನು ಕೇಳಿ ದಂಗಾದ. ಪುತ್ರನೊಂದಿಗೆ ಕೂಡಿ ಹುಡುಕಾಡಿ ಅಂತೂ 3 ದಿನದ ಬಳಿಕ ದಾನ ಪಡೆದ ವೃದ್ಧನನ್ನು ಪತ್ತೆ ಮಾಡಿದ್ದರು. ಆದರೆ ಹಾಸಿಗೆಯಲ್ಲಿ ಹಣವಿದ್ದ ವಿಷಯ ತಿಳಿಯದ ಆತನೂ ಬೇರೊಬ್ಬ ಭಿಕ್ಷುಕನಿಗೆ ಹಾಸಿಗೆ ಮಾರಿದ್ದ. ಆದರೆ ಎಷ್ಟೇ ಹುಡುಕಿದರೂ ಹಾಸಿಗೆ ಖರೀದಿಸಿದ ಆ ಭಿಕ್ಷುಕ ಇವರ ಕೈಗೆ ಸಿಗುತ್ತಿಲ್ಲ.

Comments are closed.