ರಾಷ್ಟ್ರೀಯ

ಒಡಿಶಾ: ಪತ್ನಿ ಮೇಲೆ ಪತಿಯಿಂದಲೇ ಆ್ಯಸಿಡ್ ದಾಳಿ

Pinterest LinkedIn Tumblr


ಬರ್ಹಾಂಪುರ್: ಬರ್ಹಾಂಪುರ್ ನ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ಯಾರ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಪತಿಯೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ವರದಿಯಾಗಿದೆ.

20 ವರ್ಷದ ಮಿನತಿ ಪ್ರಧಾನ್ ಆ್ಯಸಿಡ್ ದಾಳಿಗೆ ಒಳಗಾಗಿರುವ ದುರ್ದೈವಿ. ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಮಿನತಿ ಎಂದಿನಂತೆ ಕ್ಲಾಸ್ ಗೆ ಹೋಗುತ್ತಿದ್ದಾಗ ಪತಿ ನಿರಂಜನ್ ಪ್ರಧಾನ್ ಆ್ಯಸಿಡ್ ದಾಳಿ ನಡೆಸಿದ್ದು ಮಿನತಿ ಮುಖ, ಎದೆ ಮೇಲೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಿನತಿ ಮೇ 7ರಂದು ನಿರಂಜನ್ ಪ್ರಧಾನ್ ಎಂಬುವರನ್ನು ವಿವಾಹವಾಗಿದ್ದರು. ಅಂದಿನಿಂದ ವರದಕ್ಷಿಣೆಗಾಗಿ ನಿರಂಜನ್ ಕುಟುಂಬದವರು ಆಕೆಗೆ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಎರಡು ತಿಂಗಳ ಹಿಂದೆ ಮಿನತಿ ತಂದೆ ನಿರಂಜನ್ ವಿರುದ್ಧ ದೂರು ದಾಖಲಿಸಿದ್ದರು. ಇದೇ ಕಾರಣದಿಂದಾಗಿ ನಿರಂಜನ್ ಪತ್ನಿ ಮೇಲೆ ಆ್ಯಸಿಡ್ ದಾಳಿ ನಡೆಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಆ್ಯಸಿಡ್ ದಾಳಿ ನಡೆಸಿದ ಬಳಿಕ ನಿರಂಜನ್ ತಲೆಮರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

Comments are closed.