
ನವದೆಹಲಿ: ಮೊಬೈಲ್ ಸಂಖ್ಯೆಗಳನ್ನು ಆಧಾರ್‌ಗೆ ಜೋಡಿಸಲು ಇನ್ನು ಟೆಲಿಕಾಂ ಕಂಪನಿಗಳ ಕಚೇರಿಗೆ ತೆರಳಬೇಕಿಲ್ಲ. ಇದನ್ನು ಸುಲಭವಾಗಿ ಜೋಡಿಸಲು ಟೆಲಿಕಾಂ ಕಂಪನಿಗಳು ಪ್ರಸ್ತಾಪಿಸಿದ್ದ 3 ವಿಧಾನಗಳಿಗೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಅನುಮತಿ ನೀಡಿದೆ.
ಹೀಗಾಗಿ ಒಂದು ಬಾರಿಯ ಪಾಸ್‌ವರ್ಡ್ (ಒಟಿಪಿ), ಅಪ್ಲಿಕೇಶನ್ ಅಥವಾ ಐವಿಆರ್‌ಎಸ್ ಸೌಲಭ್ಯದ ಮೂಲಕವೂ ಜೋಡಿಸಬಹುದು. ಡಿ.1ರಿಂದ ಈ ವ್ಯವಸ್ಥೆ ಕಲ್ಪಿಸುವಂತೆ ಯುಐಡಿಎಐ ಸೂಚಿಸಿದೆ. ಇನ್ನೊಂದೆಡೆ ಅಂಗವಿಕಲರಿಗೆ ಮನೆ ಬಾಗಿಲಿಗೆ ಈ ಸೌಲಭ್ಯವನ್ನು ಟೆಲಿಕಾಂ ಕಂಪನಿಗಳು ಒದಗಿಸಬೇಕು ಎಂದು ಪ್ರಾಧಿಕಾರ ಹೇಳಿದೆ.
-ಉದಯವಾಣಿ
Comments are closed.