ರಾಷ್ಟ್ರೀಯ

‘ನಕಲಿ ಸೆಕ್ಸ್ ಸಿಡಿ’ ಮೂಲಕ ನನ್ನ ಮಾನಹಾನಿಗೆ ಬಿಜೆಪಿ ಸಂಚು: ಹಾರ್ದಿಕ್ ಆರೋಪ

Pinterest LinkedIn Tumblr


ಅಹ್ಮದಾಬಾದ್: ಚುನಾವಣಾ ಲಾಭ ಪಡೆಯುವ ಉದ್ದೇಶದಿಂದ ನನ್ನನ್ನು ಅವಮಾನಿಸಲು ಬಿಜೆಪಿಯವರು ನಕಲಿ ಸೆಕ್ಸ್ ಸಿಡಿ ತಯಾರಿಸುವ ಪಯತ್ನದಲ್ಲಿದ್ದಾರೆ ಎಂದು ಪಾಟಿದಾರ ಸಮುದಾಯದ ಮುಖ್ಯಸ್ಥ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.

‘ನನ್ನನ್ನು ಅವಮಾನಿಸುವ ಉದ್ದೇಶದಿಂದ ಬಿಜೆಪಿಯವರು ನಕಲಿ ಸೆಕ್ಸ್ ಸಿಡಿ ತಯಾರಿಸಿದ್ದು, ಇದನ್ನು ಚುನಾವಣೆ ಮುನ್ನ ಬಿಡುಗಡೆ ಮಾಡಲು ಯತ್ನಿಸುತ್ತಿದೆ. ಬಿಜೆಪಿಯಿಂದ ಇನ್ನೇನು ನಿರೀಕ್ಷಿಸಬಹುದು?…ಕಾಯಿರಿ, ನೋಡಿರಿ, ಮತ್ತು ಆನಂದಿಸಿ ಎಂದಿದ್ದಾರೆ.

ನಕಲಿ ಸೆಕ್ಸ್ ಸಿಡಿ ಬಗ್ಗೆ ಹೇಗೆ ತಿಳಿಯಿತು ಎಂಬ ಪ್ರಶ್ನೆಗೆ, ‘ಬಿಜೆಪಿಯಲ್ಲಿ ಇದು ಮಾಮೂಲು ಎಂದು ಹೇಳಿದ್ದಾರೆ. ಹಾರ್ದಿಕ್ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ರಾಜ್ಯ ಬಿಜೆಪಿ ಅಧ್ಯಕ್ಷ ಜಿತು ವಾಘಾನಿ ನಿರಾಕರಿಸಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ದೋಷಪೂರಿತ ವಿವಿಪಿಎಟಿ (ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್) ವ್ಯವಸ್ಥೆ ಹಾಗೂ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿರುವ ಹಾರ್ದಿಕ್, 3550 ವಿವಿಪಿಎಟಿ ವ್ಯವಸ್ಥೆಗಳು ಚುನಾವಣಾ ಆಯೋಗದ ಮೊದಲ ಹಂತದ ಪರೀಕ್ಷೆಯಲ್ಲಿ ವಿಫಲವಾಗಿದೆ. ವಾಮಮಾರ್ಗದಿಂದಲೇ ಬಿಜೆಪಿ ಚುನಾವಣೆ ಎದುರಿಸುತ್ತದೆ ಎಂದು ದೂರಿದರು. ಆದರೆ, ಈ ಆರೋಪವನ್ನು ಚುನಾವಣಾ ಆಯುಕ್ತ ಒ.ಪಿ.ರಾವತ್ ತಳ್ಳಿಹಾಕಿದ್ದಾರೆ.

Comments are closed.