ಮುಂಬೈ

ಎಕ್ಸ್‌-ವಿಡಿಯೋಸ್‌ ಚಲನಚಿತ್ರ ಡಿಸೆಂಬರ್‌ ಆರಂಭಕ್ಕೆ ಬಿಡುಗಡೆ

Pinterest LinkedIn Tumblr


ಮುಂಬಯಿ: ಮುಂಬಯಿ-ಬೆಂಗಳೂರು ಮೂಲದ ಕನ್ನಡಿಗರ ನಿರ್ಮಾಪಕತ್ವದಲ್ಲಿ ಎಕ್ಸ್‌ ವಿಡಿಯೋಸ್‌ ಎಂಬ ಚಲನಚಿತ್ರವು ತಮಿಳು ಹಾಗೂ ಹಿಂದಿ ಭಾಷೆ ಗಳಲ್ಲಿ ಸಾಜೋ ಸುಂದರ್‌ ಅವರ ನಿರ್ದೇಶನದಲ್ಲಿ ನಿರ್ಮಾಣ

ಗೊಂಡಿದ್ದು, ಇದರ ಟ್ರೇಲರ್‌ ಪ್ರಮೋ ಹಾಗೂ ಪತ್ರಿಕಾ ಗೋಷ್ಠಿಯು ನ. 1ರಂದು ಅಂಧೇರಿ ಪಶ್ಚಿಮದ ಫನ್‌ ಸಿನೆಮಾ ಲೇನ್‌ ಶರ್ಯಾನ್ಸ್‌ ಅಡಿಟೋರಿಯಂನಲ್ಲಿ ಜರಗಿತು.

ಈ ಸಂದರ್ಭದಲ್ಲಿ ಚಿತ್ರನಿರ್ದೇಶಕರಾದ ಸಾಜೋ ಸುಂದರ್‌, ನಾಯಕ ನಟ ಕನ್ನಡಿಗ ಅಜಯ್‌ರಾಜ್‌, ನಾಯಕಿ ಆಕೃತಿ, ತಂಡದ ಹೆಡ್‌ ಆಫ್‌ ಪ್ರೊಡಕ್ಷನ್‌ ಭರತ್‌, ಕಲಾವಿದ ಶಶಾಂಕ್‌ ಶೆಟ್ಟಿ ಪಿಲಾರ್‌ ಅವರು ಸೇರಿದಂತೆ ಪೂರ್ತಿ ಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು.
ಇಂದಿನ ಆವಿಷ್ಕೃತ ಉನ್ನತ ತಂತ್ರಜ್ಞಾನದಿಂದ ಒಳಿತಿನ ಜತೆಗೆ ಅದೆಷ್ಟು ಮಾರಕವಾಗಿ ಕೆಡುಕನ್ನು ನೀಡುತ್ತದೆ, ಅದರಲ್ಲಿಯೂ ಸಾಂಸಾರಿಕ ಬದುಕಿನ ಅತ್ಯಂತ ರಹಸ್ಯ ಲೈಂಗಿಕತೆ ಕೂಡ ಇಂತಹ ತಂತ್ರಜ್ಞಾನದ ಮುಖೇನ ಹೊರಜಗತ್ತಿಗೆ ಹೇಗೆ ಬಿತ್ತರಿಸಲ್ಪಡುತ್ತದೆ ಎಂಬ ಮಹತ್ವದ ವಿಷಯವನ್ನು ಈ ವಿಶೇಷ ಸಿನೆಮಾದ ಮೂಲಕ ತಿಳಿಸಲಾಗಿದೆ ಎಂಬ ಮಾಹಿತಿಯನ್ನು ಚಿತ್ರತಂಡವು ಹಲವು ನಿದರ್ಶನಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿತು.

ಬರುವ ಡಿಸೆಂಬರ್‌ ತಿಂಗಳಾರಂಭದಲ್ಲಿ ಎಕ್ಸ್‌ವಿಡಿಯೋಸ್‌ ಚಿತ್ರವು ನಗರದಾದ್ಯಂತ ಬಿಡುಗಡೆಗೊಳ್ಳಲಿದ್ದು, ಮುಂಬಯಿಯ ತುಳು-ಕನ್ನಡಿಗರು ಚಿತ್ರವನ್ನು ವೀಕ್ಷಿಸಿ, ಪ್ರೋತ್ಸಾಹಿಸುವಂತೆ ಸಾಜೋ ಸುಂದರ್‌ ವಿನಂತಿಸಿದರು.

-ಉದಯವಾಣಿ

Comments are closed.