ರಾಷ್ಟ್ರೀಯ

ನೋಟು ನಿಷೇಧ: ಡಿಜಿಟಲ್ ವಹಿವಾಟಿನಲ್ಲಿ ಶೇ.80 ರಷ್ಟು ಏರಿಕೆ, 2017-18 ಕ್ಕೆ 1,800 ಕೋಟಿ ದಾಟುವ ನಿರೀಕ್ಷೆ

Pinterest LinkedIn Tumblr

ನವದೆಹಲಿ: ನೋಟು ನಿಷೇಧದ ಪರಿಣಾಮ ಡಿಜಿಟಲ್ ವಹಿವಾಟಿನಲ್ಲಿ ಶೇ.80 ರಷ್ಟು ಏರಿಕೆಯನ್ನು ಅಂಕಿ-ಅಂಶಗಳು ಸೂಚಿಸುತ್ತಿದ್ದು, 2017-18 ನೇ ಸಾಲಿನಲ್ಲಿ ಒಟ್ಟು ವಹಿವಾಟು 1,800 ಕೋಟಿ ದಾಟಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ವರ್ಷದ ಅಕ್ಟೋಬರ್ ವರೆಗೆ ಒಟ್ಟು ಡಿಜಿಟಲ್ ವಹಿವಾಟಿನ ಮೊತ್ತ 1,000 ಕೋಟಿಯಷ್ಟಿದ್ದು, ಒಂದೇ ತಿಂಗಳ ಡಿಜಿಟಲ್ ವಹಿವಾಟಿನ ಮೊತ್ತ 2016-17 ವರ್ಷದ ಪೂರ್ಣ ಮೊತ್ತಕ್ಕೆ ಸಮವಾಗಿದೆ. ಡಿಜಿಟಲ್ ವಹಿವಾಟು ಟ್ರೆಂಡ್ ಜೂನ್, ಜುಲೈ, ಆಗಸ್ಟ್ ತಿಂಗಳಿನಿಂದ ಮುಂದುವರೆದಿದ್ದು, ಸರಾಸರಿ 136-138 ಕೋಟಿ ವಹಿವಾಟು ನಡೆದಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಡಿಜಿಟಲ್ ವಹಿವಾಟು ಏರಿಕೆ ಕಂಡಿದ್ದು, ನೋಟು ನಿಷೇಧದಿಂದ ಉಂಟಾದ ನಗದು ಅಭಾವ ತಹಬದಿಗೆ ಬಂದ ನಂತರ ಡಿಜಿಟಲ್ ವಹಿವಾಟಿನ ಪ್ರಮಾಣ ಅಚ್ಚರಿಯ ರೀತಿಯಲ್ಲಿ ಏರಿಕೆ ಕಾಣಲು ಪ್ರಾರಂಭವಾಗಿದೆ.

ಯುಪಿಐ-ಭೀಮ್ (BHIM) ಐಎಂಪಿಎಸ್, ಎಂ-ವಾಲೆಟ್ ಡೆಬಿಟ್ ಕಾರ್ಡ್ ಗಳ ಮೂಲಕ ಸರಾಸರಿ ವಹಿವಾಟುಗಳು ಹೆಚ್ಚಿದೆ, ನವೆಂಬರ್ 2016 ರಿಂದ ಡಿಜಿಟಲ್ ವಹಿವಾಟಿನ ಗಾತ್ರದಲ್ಲಿ ಶೇ.221 ರಷ್ಟು ಏರಿಕೆಯಾಗಿದ್ದು, ತೆರಿಗೆ-ರಹಿತ ರಶೀದಿ ಪೋರ್ಟಲ್ ಗಳಲ್ಲಿ ಶೇ.118 ರಷ್ಟು ವಹಿವಾಟು ಹೆಚ್ಚಿದೆ ಎಂದು ಸರ್ಕಾರ ತಿಳಿಸಿದೆ.

Comments are closed.