ರಾಷ್ಟ್ರೀಯ

ಪಕ್ಷದ ಸಭೆಗೆ ಊಟ ಕಟ್ಟಿಕೊಂಡು ಬಂದ ಮೋದಿ

Pinterest LinkedIn Tumblr

modi_food
ವಾರಣಾಸಿ: ತಮ್ಮ ಕ್ಷೇತ್ರವಾದ ವಾರಣಾಸಿಯಲ್ಲಿ ಗುರುವಾರ ನಡೆದ ಬಿಜೆಪಿ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಸಭೆಗೆ ಬರುವಾಗ ಊಟದ ಬುತ್ತಿಯನ್ನೂ ಕಟ್ಟಿಕೊಂಡು ಬಂದಿದ್ದರು.

ಮೋದಿಯವರು ಪಕ್ಷದ ಕಾರ್ಯಕರ್ತರೊಂದಿಗೆ ಊಟ ಮಾಡುತ್ತಿರುವ ಫೋಟೊವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿರುವ ಬಿಜೆಪಿ, ಇಂಥಾ ಸಮಾನತೆ ಬಿಜೆಪಿಯಲ್ಲಿ ಮಾತ್ರ ಎಂದು ಟ್ವೀಟಿಸಿದೆ.

ವಾರಣಾಸಿಯಲ್ಲಿ ನಡೆದ ಸಭೆಯಲ್ಲಿ 26,000 ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ಈ ಸಭೆಯಲ್ಲಿ ಭಾಗವಹಿಸುವವರು ಅವರವರ ಊಟದ ಬುತ್ತಿಯನ್ನು ತರಬೇಕು ಎಂದು ಪಕ್ಷ ಹೇಳಿತ್ತು. ಇದರಂತೆಯೇ ಎಲ್ಲ ಕಾರ್ಯಕರ್ತರು ಬುತ್ತಿ ಕಟ್ಟಿಕೊಂಡು ಬಂದಿದ್ದರು.

ನಾನೂ ಒಬ್ಬ ಕಾರ್ಯಕರ್ತ ಎಂದು ಮೋದಿಯವರು ಕೂಡಾ ಬುತ್ತಿ ಕಟ್ಟಿಕೊಂಡು ಬಂದಿದ್ದರು.

View image on TwitterView image on TwitterView image on Twitter
Follow
BJP ✔ @BJP4India
PM Shri @narendramodi interacted & had lunch with more than 26,000 booth workers belonging to over 1700 booths in Varanasi today.
9:24 PM – 22 Dec 2016
483 483 Retweets 1,569 1,569 likes
ಸಭೆಗೆ ಆಗಮಿಸಿದ ಕಾರ್ಯಕರ್ತರಲ್ಲಿ ಹಲವರು ಮೋದಿಗಾಗಿ ಊಟದ ಬುತ್ತಿ ತಂದಿದ್ದರು. ಆದರೆ ಮೋದಿಯವರು ಸ್ವತಃ ಊಟದ ಬುತ್ತಿ ತಂದಿದ್ದರು ಎಂದು ಇನ್ನೊಂದು ಟ್ವೀಟ್‍ನಲ್ಲಿ ಹೇಳಲಾಗಿದೆ.

ನೋಟು ರದ್ದತಿಯ ಬಗ್ಗೆ ಜನರಿಗೆ ಮನವರಿಕೆ ಮಾಡಿ, ಮೊಬೈಲ್ ಬ್ಯಾಂಕಿಂಗ್ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮೋದಿ ಕಾರ್ಯಕರ್ತರಿಗೆ ಹೇಳಿದ್ದಾರೆ.

Comments are closed.