ಅಂತರಾಷ್ಟ್ರೀಯ

ಲಿಬಿಯಾ ವಿಮಾನ ಅಪಹರಣ: ಪ್ರಯಾಣಿಕರೆಲ್ಲಾ ಬಿಡುಗಡೆ

Pinterest LinkedIn Tumblr

apaharana
ವೆಲೆಟ್ಟಾ, ಮಾಲ್ಟಾ: ಅಪಹರಣಗೊಂಡಿದ್ದ ಲಿಬಿಯಾದ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಬಿಡುಗಡೆಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಮಾನ ಸಿಬ್ಬಂದಿಯನ್ನುಳಿದು ಎಲ್ಲಾ 111 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ. ವಿಮಾನದಲ್ಲಿ 111 ಮಂದಿ ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿ ಇದ್ದರು.

ಇಬ್ಬರು ‘ಗಡಾಫಿ ಬೆಂಬಲಿಗರು’ ವಿಮಾನವನ್ನು ಅಪಹರಿಸಿದ್ದರು. ಟ್ರಿಪೋಲಿಗೆ ತೆರಳಬೇಕಿದ್ದ ಲಿಬಿಯಾದ ಏರ್‌ಬಸ್‌ A–320 ವಿಮಾನವನ್ನು ಮಾಲ್ಟಾದಲ್ಲಿ ಇಳಿಸಲಾಗಿತ್ತು.

ವಿಮಾನ ಸಿಬ್ಬಂದಿ ಮತ್ತು ಇಬ್ಬರು ಅಪಹರಣಕಾರರು ವಿಮಾನದಲ್ಲಿದ್ದಾರೆ ಎಂದು ಮಾಲ್ಟಾದ ಪ್ರಧಾನಿ ಜೋಸೆಫ್‌ ಮಸ್ಕಟ್‌ ಟ್ವೀಟ್‌ ಮಾಡಿದ್ದಾರೆ.

Follow
Joseph Muscat ✔ @JosephMuscat_JM
Potentially 2 hijackers and some crew members still on board aircraft.
7:20 PM – 23 Dec 2016
234 234 Retweets 157 157 likes

Comments are closed.