ರಾಷ್ಟ್ರೀಯ

ಆಂಧ್ರಪ್ರದೇಶ, ತೆಲಂಗಾಣದಲ್ಲಿ ಯಾಸಿನ್’ನ್ನು ಗಲ್ಲಿಗೇರಿಸುವವರೇ ಇಲ್ಲ..!

Pinterest LinkedIn Tumblr

yasin
ಹೈದರಾಬಾದ್(ಡಿ.22): ಹೈದರಾಬಾದ್‌’ನ ದಿಲ್‌ಸುಖ್‌’ನಗರ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್‌ಗೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಆದರೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ಯಾವುದೇ ಕಾರಾಗೃಹಗಳಲ್ಲಿ ಗಲ್ಲಿಗೇರಿಸುವ ವ್ಯಕ್ತಿಗಳ ಹುದ್ದೆ ಭರ್ತಿಯಾಗಿಯೇ ಇಲ್ಲ. ಅಲ್ಲಿನ ಸರ್ಕಾರಗಳು ಅವುಗಳನ್ನು ಭರ್ತಿ ಮಾಡುವ ಗೋಜಿಗೇ ಹೋಗಿಲ್ಲ ಎಂದು ‘ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
‘‘ದೀರ್ಘಕಾಲದಿಂದ ನಮ್ಮಲ್ಲಿ ಗಲ್ಲಿಗೇರಿಸುವ ಪ್ರಕರಣಗಳು ಬಂದಿಲ್ಲ. ಹೀಗಾಗಿ ಗಲ್ಲಿಗೇರಿಸುವ ಹುದ್ದೆ ಹಾಗೆಯೇ ಭರ್ತಿಯಾಗದೆಯೇ ಉಳಿದಿದೆ. ಆದರೆ, ಕಾರಾಗೃಹಗಳನ್ನು ಆಧುನೀಕರಣಗೊಳಿಸಿದ್ದೇವೆ,’’ ಎಂದು ತೆಲಂಗಾಣದ ಬಂದೀಖಾನೆ ವಿಭಾಗದ ಐಜಿಪಿ ನರಸಿಂಹ ತಿಳಿಸಿದ್ದಾರೆ.
ಆಂಧ್ರಪ್ರದೇಶ ವಿಭಜನೆಯಾಗುವುದಕ್ಕಿಂತ ಮೊದಲು ರಾಜಮಂಡ್ರಿ ಮತ್ತು ವಿಶಾಖಪಟ್ಟಣದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸುವ ವ್ಯವಸ್ಥೆ ಇತ್ತು. ಆಂಧ್ರಪ್ರದೇಶದ ರಾಜಮಂಡ್ರಿಯ ಕಾರಾಗೃಹದಲ್ಲಿ 1976ರ ಫೆಬ್ರವರಿಯಲ್ಲಿ ಗಲ್ಲಿಗೇರಿಸಿದ್ದೇ ಕೊನೆಯ ಪ್ರಕರಣ.

Comments are closed.