ರಾಷ್ಟ್ರೀಯ

ನೋಟು ನಿಷೇಧ: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ

Pinterest LinkedIn Tumblr

goldನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ದೇಶಾದ್ಯಂತ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು, ಇದರ ಪರಿಣಾಮ ಚಿನ್ನದ ಬೆಲೆ ಕಳೆದ 10 ತಿಂಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದೆ.
ಚೀನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಶುಕ್ರವಾರ ಪ್ರತಿ ಗ್ರಾಂಗೆ 130 ರುಪಾಯಿ ಕುಸಿಯುವ ಮೂಲಕ 10 ಗ್ರಾಂ 28,580 ರು.ಗೆ ವಹಿವಾಟು ಮುಗಿಸಿದೆ. ಇದು ಕಳೆದ 10 ತಿಂಗಳಲ್ಲೇ ಅತ್ಯಂತ ಕಡಿಮೆ ಬೆಲೆಯಾಗಿದೆ. ಚಿನ್ನದ ವ್ಯಾಪಾರಿಗಳಿಂದ ಹಾಗೂ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಕುಸಿತವೇ ಬೆಲೆ ಇಳಿಕೆಗೆ ಕಾರಣ ಎನ್ನಲಾಗಿದೆ.
ಇನ್ನು ಬೆಳ್ಳಿ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದ್ದು, ಇಂದಿನ ವಹಿವಾಟಿನಲ್ಲಿ ಪ್ರತಿ ಕೆ.ಜಿ. 250 ರುಪಾಯಿ ಹೆಚ್ಚಳದೊಂದಿಗೆ ಕೆ.ಜಿ.ಗೆ 41,850ಕ್ಕೆ ತಲುಪಿತು. ಕೈಗಾರಿಕಾ ಘಟಕಗಳ ಹಾಗೂ ನಾಣ್ಯ ತಯಾರಕ ಬೇಡಿಕೆ ಹೆಚ್ಚಳದ ಪರಿಣಾಮ ಬೆಳ್ಳಿ ಬೆಲೆ ಏರಿಕೆಗೆ ಕಾರಣವಾಗಿದೆ.

Comments are closed.