ರಾಷ್ಟ್ರೀಯ

13,000 ಕೋಟಿ ಆದಾಯ ಘೋಷಿಸಿದ ಮಹೇಶ್ ಶಾಗೆ ರಾಜ್ಯದ ನಂಟು?

Pinterest LinkedIn Tumblr

mahesh-shahಅಹ್ಮದಾಬಾದ್‌: ಐಡಿಎಸ್‌ ಯೋಜನೆಯಡಿ ರೂ.13,860 ಕೋಟಿ ಆದಾಯ ಘೋಷಿಸಿರುವ ಗುಜರಾತ್‌’ನ ಮಹೇಶ್‌ ಶಾ ಜತೆ ಕರ್ನಾಟಕ ಮತ್ತು ತೆಲಂಗಾಣದ ಪ್ರಭಾವಿ ವ್ಯಕ್ತಿಗಳ ಸಂಪರ್ಕ ಇರುವುದು ಪತ್ತೆಯಾಗಿದೆ.
ಕರ್ನಾಟಕದ ಕೈಗಾರಿಕೋದ್ಯಮಿಗಳ ಪೈಕಿ ರಾಜ್ಯ ರಾಜಕಾರಣದ ಮೇಲೆ ಪ್ರಮುಖ ಪಾತ್ರ ವಹಿಸುವ ವ್ಯಕ್ತಿಯೊಬ್ಬರು ಐಡಿಎಸ್‌ ಯೋಜನೆಯಡಿ ಘೋಷಿಸಿಕೊಳ್ಳಲು ದೊಡ್ಡ ಪ್ರಮಾಣದ ಹಣವನ್ನು ಶಾ ಅವರಿಗೆ ನೀಡಿದ್ದರು ಎಂದು ಹೇಳಲಾಗಿದೆ. ‘‘ಐಡಿಎಸ್‌ನಡಿ ಆದಾಯ ಘೋಷಿಸಿಕೊಳ್ಳಲು ಗುಜರಾತ್‌ ಅಲ್ಲದೆ, ದಕ್ಷಿಣ ರಾಜ್ಯಗಳ ಜನ ಭಾರಿ ಮೊತ್ತದ ಹಣ ನೀಡಲಿದ್ದಾರೆ ಎಂದು ಶಾ ಹೇಳಿಕೆ ನೀಡಿದ್ದಾರೆ,” ಎಂದು ತೆರಿಗೆ ಇಲಾಖೆಯ ಮೂಲಗಳು ತಿಳಿಸಿವೆ.
ಅಲ್ಲದೆ, ಹೈದರಾಬಾದ್‌, ಮುಂಬೈ, ಅಹ್ಮದಾಬಾದ್‌, ವಡೋದರಾ ಮತ್ತು ಸೌರಾಷ್ಟ್ರ ಪ್ರದೇಶದ ಹಲವು ಪ್ರಭಾವಿ ವ್ಯಕ್ತಿಗಳಿಗೆ ತಮ್ಮ ಹಣವನ್ನು ಆದಾಯವನ್ನಾಗಿ ಘೋಷಿಸಲು ಮಹೇಶ್‌ ಶಾ ಅಗತ್ಯವಿತ್ತು ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ‘‘ಆದಾಯವನ್ನಾಗಿ ಘೋಷಿಸಿಕೊಳ್ಳಲು ಯಾವೆಲ್ಲ ವ್ಯಕ್ತಿಗಳು ಹಣ ನೀಡಿದ್ದರು ಎಂಬುದರ ಬಗ್ಗೆ ಶಾ ತುಟಿ ಬಿಚ್ಚುತ್ತಿಲ್ಲ. ಆದರೆ, ದಕ್ಷಿಣ ರಾಜ್ಯಗಳ ಕೆಲ ಪ್ರಭಾವಿ ನಾಯಕರು ಮತ್ತು ಶ್ರೀಮಂತ ವ್ಯಕ್ತಿಗಳು ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಪಷ್ಟಸೂಚನೆ ನೀಡಿದ ಶಾ, ಅವರ ಹೆಸರುಗಳನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಿದ್ದಾರೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.