ರಾಷ್ಟ್ರೀಯ

ಸಿಸಿಟಿವಿ ಕ್ಯಾಮೆರಾದಲ್ಲಿ ಬಯಲಾಗಿದೆ ಸ್ವಯಂಘೋಷಿತ ದೇವಮಾನವನೊಬ್ಬನ ಕಾಮದಾಟ

Pinterest LinkedIn Tumblr

muralidhar-baba

ಅಮರಾವತಿ: ಅಸಾರಾಮ್ ಬಾಪು ಲೈಂಗಿಕ ಹಗರಣದ ಬಳಿಕ ಮತ್ತೊಬ್ಬ ಸ್ವಯಂಘೋಷಿತ ದೇವಮಾನವನ ಸೆಕ್ಸ್ ಹಗರಣ ಬಾತ್ ರೂಮಿನಲ್ಲಿಟ್ಟ ಸಿಸಿಟಿವಿ ಕ್ಯಾಮೆರಾದಲ್ಲಿ ಬಯಲಾಗಿದೆ. ಅಮರಾವತಿಯ ಸಂತ ಮುರಳೀಧರ ಬಾಬಾ, ತನ್ನ ಬಳಿಗೆ ಕಷ್ಟ ಹೇಳಿಕೊಳ್ಳಲು ಬರುತ್ತಿದ್ದ ಮಹಿಳೆಯರನ್ನ ಬಾತ್ ರೂಮಿಗೆ ಕರೆದೊಯ್ದು ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಪ್ರಕರಣ ಇದೀಗ ಬಯಲಾಗಿದೆ.

ಆಶ್ರಮದಲ್ಲಿ ಬಾತ್ ರೂಮಿನಲ್ಲಿ ವ್ಯಕ್ತಿಯೊಬ್ಬ ಅಳವಡಿಸಿದ್ದ ಸಿಸಿ ಕ್ಯಾಮೆರಾದ ವಿಡಿಯೋ ಸ್ವಾಮೀಜಿಯ ಲೈಂಗಿಕ ಹಗರಣವನ್ನ ಬಯಲು ಮಾಡಿದೆ. ಆಶ್ರಮಕ್ಕೆ ಬಂದ ಮಹಿಳೆಯೊಬ್ಬಳನ್ನ ಬಾತ್`ರೂಮಿಗೆ ಕರೆದೊಯ್ದು ಬಾಬಾ ಕಾಮಕ್ರೀಡೆ ನಡೆಸುತ್ತಿರುವ ದೃಶ್ಯ ಇದರಲ್ಲಿದೆ. ಈ ಸಂಬಂಧ ಎಫ್`ಐಆರ್ ದಾಖಲಾಗಿದ್ದು, ಪೊಲೀಸರು ತಲೆಮರೆಸಿಕೊಂಡಿರುವ ಬಾಬಾಗಾಗಿ ಹುಡುಕಾಟ ನಡೆಸಿದ್ದಾರೆ.ಈ ಕಾಮುಕ ಬಾಬಾನಿಂದ ಹಲವು ಮಹಿಳೆಯರು ವಂಚನೆಗೊಳಗಾಗಿದ್ದಾರೆ ಎನ್ನಲಾಗಿದೆ.

ಈ ನೀಚನ ಕಾಮ ಕರ್ಮಕಾಂಡವನ್ನು ಬಯಲಿಗೆಳೆಯಲು ಆತನ ಆಶ್ರಮದ ಸ್ನಾನಗೃಹದಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ರಹಸ್ಯವಾಗಿ ಇರಿಸಿದ್ದರು. ತನ್ನ ಆಶ್ರಮಕ್ಕೆ ಬಂದ ಯುವತಿಯನ್ನು ಬಾಬಾ ಆಲಂಗಿಸಿ ಮುದ್ದಾಡುತ್ತಿರುವ ದೃಶ್ಯ ಸೆರೆಯಾಗಿ ಇನ ಕಾಮಪುರಾಣ ಬಹಿರಂಗಗೊಂಡಿತು. ಪೊಲೀಸರು ಪರಿಶೀಲನೆ ನಡೆಸಿ ಬಾಬಾ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ನಾಪತ್ತೆಯಾಗಿರುವ ಸ್ವಘೋಷಿತ ದೇವಮಾನವನಿಗಾಗಿ ಪೊಲೀಸರು ಬಲೆ ಬೀಸಿದ್ಧಾರೆ. ನೀಚ ಸ್ವಾಮಿಯನ್ನು ಶೀಘ್ರ ಸೆರೆಹಿಡಿಯುವಂತೆ ಆತನಿಂದ ವಂಚನೆಗೆ ಒಳಗಾದ ಮಹಿಳೆಯರು ಒತ್ತಾಯಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಈ ರಾಸಲೀಲೆ ಪ್ರಕರಣವು ಸ್ಥಳೀಯ ವಾರ್ತಾವಾಹಿನಿಯಲ್ಲಿ ಬಿತ್ತರಗೊಂಡಿತ್ತು.

Comments are closed.