ರಾಷ್ಟ್ರೀಯ

ಮೋದಿಯು ವಾಜಪೇಯಿ ಜೊತೆ ಮಾಡಿದ್ದ ಡ್ಯಾನ್ಸ್ ಈಗ ವೈರಲ್!

Pinterest LinkedIn Tumblr

vajapeyiನವದೆಹಲಿ: ಹಲವು ವರ್ಷಗಳ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಡ್ಯಾನ್ಸ್ ಈಗ ವೈರಲ್ ಆಗಿದೆ.

ಬಿಜೆಪಿಯ ನಾಯಕರು ಹೋಳಿ ಆಚರಣೆ ವೇಳೆ ‘ರಂಗ್ ಬರ್‍ಸೇ’ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದರು. ಇದರಲ್ಲಿ ವಾಜಪೇಯಿ ಹಾಗೂ ಮೋದಿ ಪರಸ್ಪರ ಕೈ ಹಿಡಿದುಕೊಂಡು ಹಾಡಿನ ಟ್ಯೂನ್‍ಗೆ ತಕ್ಕಂತೆ ಕುಣಿದಾಡಿದ್ದರು. ಇದೇ ವೀಡಿಯೋದಲ್ಲಿ ಬಿಜೆಪಿಯ ಮತ್ತೊಬ್ಬ ಮುಖಂಡ ವಿಜಯ್ ಗೋಯಲ್ ಅವರೂ ಡ್ಯಾನ್ಸ್ ಮಾಡಿದ್ದಾರೆ.

ಕೆಲವು ವರ್ಷಗಳ ಹಿಂದೆ ಹೋಳಿ ಹಬ್ಬದ ಆಚರಣೆ ವೇಳೆ ಪರಸ್ಪರ ಬಣ್ಣ ಎರಚಿ ಬಿಜೆಪಿ ನಾಯಕರು ಸಂಭ್ರಮಾಚರಣೆ ನಡೆಸಿದ್ದರು.

Comments are closed.