ರಾಷ್ಟ್ರೀಯ

ಪ್ರಧಾನಮಂತ್ರಿ ಕಚೇರಿಯು ಅನುಮತಿ ಇಲ್ಲದೆ ಜಿಯೋ ಜಾಹಿರಾತಿನಲ್ಲಿ ಪ್ರಧಾನಿ ಮೋದಿ ಫೋಟೋ ಬಳಕೆ !

Pinterest LinkedIn Tumblr

jio

ನವದೆಹಲಿ: ಜಿಯೋ ಜಾಹಿರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಿಕೊಳ್ಳಲು ಪ್ರಧಾನಮಂತ್ರಿ ಕಚೇರಿಯು ಅನುಮತಿ ನೀಡಿರಲಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ನೀರಜ್ ಶೇಖರ್ ಅವರು ರಾಜ್ಯಸಭೆಯಲ್ಲಿ ಈ ಕುರಿತು ಪ್ರಶ್ನೆ ಎತ್ತಿದರು. ಇದಕ್ಕೆ ಉತ್ತರಿಸಿದ ಜಿಯೋ ಜಾಹಿರಾತಿನಲ್ಲಿ ಮೋದಿ ಅವರ ಭಾವಚಿತ್ರ ಬಳಿಸಿಕೊಂಡಿರುವ ವಿಷಯ ನನ್ನ ಗಮನಕ್ಕೂ ಬಂದಿದೆ. ಆದರೆ ಮೋದಿ ಅವರ ಭಾವಚಿತ್ರ ಬಳಿಸಿಕೊಳ್ಳಲು ಕಚೇರಿ ಅನುಮತಿ ನೀಡಿರಲಿಲ್ಲ ಎಂದು ಹೇಳಿದರು.

ಇನ್ನು 1950ರ ಲಾಂಛನ ಮತ್ತು ಹೆಸರುಗಳ ದುರ್ಬಳಕೆ ತಡೆ ಕಾಯ್ದೆಯಡಿ ಜಿಯೋ ಕಂಪನಿ ವಿರುದ್ಧ ಕ್ರಮಕೈಗೊಳ್ಳುತ್ತೀರ ಎಂದು ನೀರಜ್ ಶೇಖರ್ ಕೇಳಿದ್ದು ಇದಕ್ಕೆ ರಾಥೋರ್ ಲಾಂಛನ ಮತ್ತು ಹೆಸರುಗಳ ದುರ್ಬಳಕೆ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳುವ ಅಧಿಕಾರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯಕ್ಕಿದೆ ಎಂದರು.

Comments are closed.