ರಾಷ್ಟ್ರೀಯ

ಬರೀ 500 ರುಪಾಯಿಯಲ್ಲಿ ಸರಳ ಮದುವೆಯಾಗಿ ಸಮಾಜಕ್ಕೆ ಮಾದರಿಯಾದ ಆಂಧ್ರ ಐಎಎಸ್ ಅಧಿಕಾರಿಣಿ; 48 ಗಂಟೆಯೊಳಗೆ ಕೆಲಸಕ್ಕೆ ಹಾಜರ್

Pinterest LinkedIn Tumblr

ias-couple-in-ap

ಹೈದರಾಬಾದ್: ಇತ್ತೀಚೆಗಷ್ಟೇ ಮಾಜಿ ಸಚಿವ ಗಾಲಿ ಜನಾರ್ದನ್ ರೆಡ್ಡಿ ತಮ್ಮ ಮಗಳ ಮದುವೆಗಾಗಿ 500 ಕೋಟಿ ರುಪಾಯಿ ವೆಚ್ಚ ಮಾಡಿದ್ದರು. ಇದರ ನಡುವೆ ಅಪರೂಪವೆಂಬಂತೆ ಆಂಧ್ರದ ಐಎಎಸ್ ಅಧಿಕಾರಿಯೊಬ್ಬರು ಬರೀ 500 ರುಪಾಯಿಯಲ್ಲಿ ಸರಳ ಮದುವೆಯಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ವಿಜಯವಾಡದ ಉಪ ಜಿಲ್ಲಾಧಿಕಾರಿ ಡಾ. ಸಲೋನಿ ಸಿದಾನ ಎಂಬುವರು ಮಧ್ಯಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಆಶಿಶ್ ವಸಿಷ್ಠ ಎಂಬುವರನ್ನು ಸೋಮವಾರ ವಿವಾಹವಾಗಿದ್ದರು. ಭಿಂಡ್ ಹೆಚ್ಚುವರಿ ಜಿಲ್ಲಾ ಕೋರ್ಟ್ ನಲ್ಲಿ 500 ರುಪಾಯಿ ಶುಲ್ಕ ನೀಡಿ ಸರಳ ಮದುವೆಯಾಗಿದ್ದರು.

ಇದೀಗ ಮದುವೆಯಾಗಿ 48 ಗಂಟೆಯೊಳಗೆ ವಿಜಯವಾಡಕ್ಕೆ ಹಿಂತಿರುಗಿ ಕರ್ತವ್ಯಕ್ಕೆ ಹಾಜರಾಗಿರುವ 27ರ ಹರೆಯದ ಸಲೋನಿ ಸಹೋದ್ಯೋಗಿಗಳಿಗೆ ಸಿಹಿತಿಂಡಿ ಹಂಚಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಲೋನಿ ಮದುವೆ ಎಂಬುದು ಖಾಸಗಿ ಸಂಗತಿ. ನಾವು ಮೊದಲೇ ಸರಳ ವಿವಾಹವಾಗಬೇಕೆಂದು ನಿರ್ಧರಿಸಿದ್ದು ಅಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ಹೇಳಿದ್ದಾರೆ.

Comments are closed.