ರಾಷ್ಟ್ರೀಯ

ಪಾನ್ ಕಾರ್ಡ್ ಇಲ್ಲದೇ ಇನ್ನು ಮುಂದೆ ಬ್ಯಾಂಕ್ ವ್ಯವಹಾರ ಸಾಧ್ಯವಿಲ್ಲ!

Pinterest LinkedIn Tumblr

PAN-Card-850ನವದೆಹಲಿ(ನ.29): ನೋಟ್ ಬ್ಯಾನ್ ಬಳಿಕ ಪಾನ್ ಕಾರ್ಡ್ ಅತ್ಯಂತ ಮಹತ್ವದ ದಾಖಲೆಯಾಗಿ ಗುರುತಿಸಿಕೊಂಡಿದೆ. ಪಾನ್ ಕಾರ್ಡ್ ಇಲ್ಲದೆ ಬ್ಯಾಂಕ್’ನಲ್ಲಿ ಹಣ ಜಮೆ ಮಾಡಲು ಇಲ್ಲವೇ ವಿತ್’ಡ್ರಾ ಮಾಡಲು ಸಾಧ್ಯವಿಲ್ಲ. ನೋಟ್ ಬ್ಯಾನ್ ಬಳಿಕ ಬ್ಯಾಂಕ್ಗಳು ಹಣಕಾಸು ವ್ಯವಹಾರಕ್ಕೆ ಪಾನ್ ಕಾರ್ಡ್ ಕಡ್ಡಾಯವೆಂದಿದ್ದಾರೆ.
ಹಣಕಾಸು ಇಲಾಖೆಗೆ ನೀವು ಬ್ಯಾಂಕ್ ಮೂಲಕ ನಡೆಸುವ ಹಣಕಾಸು ವ್ಯವಹಾರ ತಿಳಿಯುವ ಉದ್ದೇಶದಿಂದ ಇದು ಜಾರಿಗೆ ಬಂದಿದೆ. ನೋಟ್ ಬ್ಯಾನ್ ಘೋಷಣೆಯೊಂದಿಗೇ ‘ನೀವು ನಿಮ್ಮ ಖಾತೆಗೆ 2.5 ಲಕ್ಷಕ್ಕಿಂತ ಹಣ ಜಮೆ ಮಾಡುವಿರಾದರೆ ಆದಾಯ ತೆರಿಗೆ ಇಲಾಖೆಗೆ ನಿಮ್ಮ ಮಾಹಿತಿಯನ್ನು ರವಾನಿಸಲಾಗುವುದು’ ಕೇಂದ್ರ ಸರ್ಕಾರ ಎಂದೂ ತಿಳಿಸಿತ್ತು.
ಇನ್ನು 50 ಸಾವಿರ ಇಲ್ಲವೇ ಅದಕ್ಕೂ ಹೆಚ್ಚು ಮೊತ್ತ ನೀವು ಪದೇ ಪದೇ ನಿಮ್ಮ ಬ್ಯಾಂಕ್ ಅಕೌಂಟ್’ಗೆ ಜಮೆ ಇಲ್ಲವೇ ವಿತ್’ಡ್ರಾ ಮಾಡಿದರೂ ಈ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ರವಾನೆಯಾಗುತ್ತದೆ. ಆದರೆ ಜನರು ಬ್ಯಾಂಕ್’ಗೆ ಪಾನ್ ಕಾರ್ಡ್ ಡಿಟೇಲ್ಸ್ ಕೊಡುವುದನ್ನು ತಪ್ಪಿಸಲು 50 ಸಾವಿರಕ್ಕಿಂತ ಕಡಿಮೆ ಮೊತ್ತ ಅಕೌಂಟ್’ಗೆ ಜಮೆ ಮಾಡಲಾರಂಭಿಸಿದ್ದಾರೆ. ಈ ಕಾರಣದಿಂದ ಇದೀಗ ಬ್ಯಾಂಕ್ ಸಿಬ್ಬಂದಿಗಳ ದೃಷ್ಟಿ 25 ಸಾವಿರ ಮೊತ್ತ ಜಮೆ ಮಾಡುವ ಗ್ರಾಹಕರ ಮೇಲೆ ನೆಟ್ಟಿದೆ.
ಹಲವಾರು ಮಹತ್ತರ ಬದಲಾವಣೆಗಳು
ಕಪ್ಪು ಹಣ ತಡೆಗಟ್ಟಲು ಮೋದಿ ಸರ್ಕಾರ ನೋಟ್ ಬ್ಯಾನ್’ನಂತಹ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರದಿಂದ ಜನರು ಹಣ ಸಿಗದೆ ಪರದಾಡುತ್ತಿದ್ದಾರೆ ಆದರೂ ವಿಶ್ಲೇಷಕರು ಅರ್ಥವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ನಿರ್ಧಾರ ಉತ್ತಮವೆಂದಿದ್ದಾರೆ. ಇನ್ನು ನೀವು ನಿಮ್ಮ ಬ್ಯಾಂಕ್ ಅಕೌಂಟ್’ನಿಂದ ಪದೇ ಪದೇ ಹಣಕಾಸು ವ್ಯವಹಾರ ಮಾಡುತ್ತಿರುವಿರಾದರೆ ಪಾನ್ ಕಾರ್ಡ್’ಗೆ ಸಂಬಂಧಪಟ್ಟ ನಿಯಮಗಳಲ್ಲಿ ಹಲವಾರು ಬದಲಾವಣೆಗಳಾಗಿವೆ ಎಂಬುವುದು ನಿಮ್ಮ ಗಮನದಲ್ಲಿರಲಿ.
ಪಾನ್ ಕಾರ್ಡ್ ನಿಯಮಗಳಲ್ಲಾದ ಬದಲಾವಣೆಗಳೇನು?
ನೋಟ್ ಬ್ಯಾನ್ ಘೋಷಣೆ ಹೊರಡಿಸಿರುವ ಸಂದರ್ಭದಲ್ಲಿ ಅಕೌಂಟ್ ಒಂದರಲ್ಲಿ 215 ಲಕ್ಷ ಹಣವಿದ್ದರೆ ಆ ಅಕೌಂಟ್ ಡಿಟೇಲ್ಸ್’ನ್ನು ಆದಾಯ ತೆರಿಗೆ ಇಲಾಖೆಗೆ ರವಾನಿಸುತ್ತೇವೆಂಬ ಸೂಚನೆಯನ್ನು ಹೊರಡಿಸಿದ್ದರು. ಆದರೆ ನೀವು 50 ಸಾವಿರದ ವ್ಯವಹಾರ ಮಾಡಿದರೂ ಬ್ಯಾಂಕ್’ಗಳು ಈ ಮಾಹಿತಿಯನ್ನು ನಿಮಗರಿವಿಲ್ಲದಂತೆ ಐಟಿ ವಿಭಾಗಕ್ಕೆ ಕಳುಹಿಸಿಕೊಡುತ್ತದೆ. ಒಂದು ವೇಳೆ ಹೀಗಾದರೆ ನೀವು ನಿಮ್ಮ ಪಾನ್ ಕಾರ್ಡ್’ಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯನ್ನಿ ಐಟಿ ವಿಭಾಗಕ್ಕೆ ಅವರು ಕೇಳಿದ ಸಂದರ್ಭದಲ್ಲಿ ನೀಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ 50 ಸಾವಿರ ರೂಪಾಯಿ ಡೆಪಾಸಿಟ್ ಮಾಡಿದರೆ ಬ್ಯಾಂಕ್’ಗೆ ಪಾನ್ ಕಾರ್ಡ್ ನೀಡಬೇಕಾಗುತ್ತದೆ ಎಂಬ ಕಾರಣದಿಂದ ಹಲವಾರು ಮಂದಿ ಪದೇ ಪದೇ ಕಡಿಮೆ ಮೊತ್ತ ಜಮಾ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಾಗಿ ಇನ್ಮುಂದೆ 25 ಸಾವಿರ ಮೊತ್ತ ವ್ಯವಹಾರ ಮಾಡುವವರ ಗ್ರಾಹಕರ ಮೇಲೆ ಬ್ಯಾಂಕ್ ನಿಗಾ ವಹಿಸಲು ಯೋಚಿಸಿದೆ.
ಇನ್ನು ಬ್ಯಾಂಕ್ ಅಕೌಂಟ್ ಇದ್ದರೂ ಪಾನ್ ಕಾರ್ಡ್ ಮಾಡಿಸದ ಗ್ರಾಹಕರ ಮೇಲೂ ಬ್ಯಾಂಕ್ ನಿಗಾ ವಹಿಸಲಾರಂಭಿಸಿದೆ. ಇವರು ಇನ್ಮುಂದೆ ಪಾನ್ ಕಾರ್ಡ್ ಇಲ್ಲದೆ ಹಣಕಾಸು ವ್ಯವಹಾರ ಮಾಡಲು ಸಾಧ್ಯವಾಗುವುದಿಲ್ಲ.
ಇನ್ನೂ ಶಾಕಿಂಗ್ ವಿಚಾರವೆಂದರೆ ಇನ್ಮುಂದೆ ಬ್ಯಾಂಕ್ ಇಲ್ಲವೇ ಕೋ-ಆಪರೇಟಿವ್ ಸೊಸೈಟಿಗಳಲ್ಲಿ ಡಿಡಿ ಮಾಡಿಸುವ ಸಂದರ್ಭದಲ್ಲೂ ನೀವು ಪಾನ್ ಕಾರ್ಡ್ ಕೊಡಲೇಬೇಕಾದ ನಿಯಮವೂ ಬಂದಿದೆ.
ಇಷ್ಟೇ ಅಲ್ಲದೆ ನೀವು ಬ್ಯಾಂಕ್ ಇಲ್ಲವೇ ಕೋ- ಆಪರೇಟಿವ್ ಸೊಸೈಟಿಗಳಲ್ಲಿ ಹೊಸ ಖಾತೆ ತೆರೆಯುತ್ತಿರುವುರಾದರೆ ಆ ಸಂದರ್ಭದಲ್ಲೂ ನೀವು ಪಾನ್ ಕಾರ್ಡ್ ತೋರಿಸಬೇಕಾಗುತ್ತದೆ. ಆದರೆ ಜನ್ ಧನ್ ಖಾತೆಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಮೋಸಗಾರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಇಂತಹ ನಿಯಮಗಳನ್ನು ಜಾರಿಗೊಳಿಸಿದ್ದಾರೆ. ಇನ್ನು ಒಂದೇ ಹೆಸರಿನಲ್ಲಿ ಹಲವಾರು ಅಕೌಂಟ್’ಗಳಿದ್ದು, ವಿವಿಧ ರೀತಿಯಿಂದ ಜಮೆಯಾಗುತ್ತಿದ್ದ ಹಣದ ವಹಿವಾಟಿನ ಮೇಲೂ ಸರ್ಕಾರ ನಿಗಾ ವಹಿಸಲಿದೆ.
ಈ ನಿಯಮಾವಳಿಗಳಿಂದ ಜನಸಾಮಾನ್ಯರು ತಲೆಕೆಡಿಸಿಕೊಳ್ಳದೆ ಸುಖವಾಗಿ ನಿದ್ರಿಸಬಹುದು, ಆದರೆ ಕಾಳಧನಿಕರ ನಿದ್ಧೆ ಕೆಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Comments are closed.