ಅಂತರಾಷ್ಟ್ರೀಯ

19ನೇ ಶತಮಾನದ ಏಕೈಕ ವ್ಯಕ್ತಿ ಜಗತ್ತಿನ ಹಿರಿಯಜ್ಜಿಗೆ 117ನೇ ಜನುಮ ದಿನ

Pinterest LinkedIn Tumblr
(FILES) This file photo taken on May 14, 2016 shows Emma Morano, 116, posing for AFP photographer in Verbania, North Italy. An alert and chatty Italian woman, Emma Morano, on November 29, 2016 celebrates her 117th birthday as the last known person alive who was born in the 19th century. Born November 29, 1899,  she is the world's oldest living person and the secret to her longevity appears to lie in eschewing usual medical wisdom.  / AFP PHOTO / OLIVIER MORIN
This file photo 

ವರ್ಬೇನಿಯಾ: ಇಟೆಲಿಯ ಪೀಡ್‍ಮೌಂಟ್ ಪ್ರದೇಶದಲ್ಲಿ ಕ್ರಿ.ಶ. 1899ರ ನವೆಂಬರ್‌ 29 ರಂದು ಜನಿಸಿದ ಎಮ್ಮಾ ಮೊರಾನೋ ಎಂಬುವವರು ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

117ನೇ ವರ್ಷದ ಜನುಮದಿನದ ಸಂಭ್ರಮ ದಲ್ಲಿರುವ ಈಕೆ 19 ನೇ ಶತಮಾನದ ಏಕೈಕ ವ್ಯಕ್ತಿಯೆಂಬ ಗರಿಮೆಯನ್ನೂ ಹೊಂದಿದ್ದಾರೆ. ಮೊದಲ ಮಹಾಯುದ್ದ ಕಾಲದಲ್ಲಿ ರಕ್ತದ ಕೊರತೆ  ಸಮಸ್ಯೆಯಿಂದ ಬಳಲಿದ್ದ ಎಮ್ಮಾ ತಮ್ಮ15ನೇ ವಯಸ್ಸಿನಿಂದಲೇ ಮಿತ ಆಹಾರ ಕ್ರಮವನ್ನು ರೂಢಿಸಿಕೊಂಡು, ಪ್ರತಿನಿತ್ಯವೂ ಕೇವಲ ಮೂರು ಮೊಟ್ಟೆ ಹಾಗೂ ಅಲ್ಪ ಪ್ರಮಾಣದ ಹಣ್ಣು ತರಕಾರಿಯನ್ನು ಸೇವಿಸುವುದರೊಂದಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ.

‘ಪ್ರತಿನಿತ್ಯ ಅಲ್ಪ ಪ್ರಮಾಣದ ತರಕಾರಿ, ಹಣ್ಣು ಹಾಗೂ ಮೊಟ್ಟೆಯ ಜೊತೆಗೆ ರಾತ್ರಿ ವೇಳೆಗೆ ಸ್ವಲ್ಪ ಚಿಕನ್‌ ಸವಿಯುತ್ತಾರೆ. ಕೇವಲ ಮಿತ ಆಹಾರ ಸೇವನೆಯ ಹೊರತಾಗಿಯೂ ಉತ್ತಮ ಆರೋಗ್ಯ ಕಾಪಾಡಿಕೊಂಡಿರುವುದು ಆಶ್ಚರ್ಯದ ಸಂಗತಿ’ ಎಂದು ಎಮ್ಮಾ ಅವರ ಆರೋಗ್ಯದ ಗುಟ್ಟು ಬಿಚ್ಚಿಟ್ಟರು ಕಳೆದ 27 ವರ್ಷದಿಂದ ಹಿರಿಯಜ್ಜಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿರುವ ಕಾರ್ಲೋ ಬಾವ.

ತಮ್ಮ 39ನೇ ವಯಸ್ಸಿನಲ್ಲಿ ಸಾಂಸಾರಿಕ ಜೀವನದಲ್ಲಿ ಬೇಸರಗೊಂಡು ಪತಿಯಿಂದ ದೂರಾಗಿ ಒಬ್ಬಂಟಿಗರಾಗಿ ಜೀವನ ಮುಂದುವರಿಸಿದ ಎಮ್ಮಾ
26ನೇ ವಯಸ್ಸಿನಲ್ಲಿ ವಿವಾಹವಾಗಿದ್ದರು.

‘ನಾನು ಯಾರ ಅಧೀನದಲ್ಲಿಯೂ ಬದುಕಲು ಇಚ್ಛಿಸುವುದಿಲ್ಲ. ಮದುವೆಗೆ ಪ್ರಸ್ತಾಪ ಮಾಡುವಾಗ ನನ್ನ ಪತಿ, ನನ್ನನ್ನು ಮದುವೆಯಾಗುವ ನೀನು ಭಾಗ್ಯವಂತೆ. ಇಲ್ಲದಿದ್ದರೆ ನಾನು ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ನನ್ನನ್ನು ವರಿಸಿದ್ದರು. ಆದರೆ ಆ ಬಳಿಕ ಆತನ ಕಿರುಕುಳ ಹೆಚ್ಚಾಯಿತು. ನಮ್ಮ ಮಗುವಿನ ಅಕಾಲಿಕ ಮರಣದ ನಂತರ ಆತನಿಂದ ದೂರಾದೆ’ ಎಂದು ಹೇಳುತ್ತಾರೆ.

ಸದ್ಯ ವರ್ಬೇನಿಯಾದಲ್ಲಿ ವಾಸವಿರುವ ಇವರು ಜೀವನ ನಿರ್ವಹಣೆಗಾಗಿ 75 ನೇ ವಯಸ್ಸಿನವರೆಗೂ ದುಡಿದು ಬದುಕು ಕಟ್ಟಿಕೊಂಡಿದ್ದರು.
ಈ ಮೂಲಕ ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿರುವ ಎಮ್ಮಾ ಮಹಿಳಾವಾದದ ಪ್ರತಿನಿಧಿಯಾಗಿ ಗೋಚರಿಸುತ್ತಾರೆ ಎಂದು ಬಿಬಿಸಿ ಪ್ರಶಂಸಿಸಿದೆ.

Comments are closed.